ಅಮಿತ್‌ ಶಾ ದತ್ತು ಪುತ್ರ ಎಂದು ಕೋಟಿ-ಕೋಟಿ ವಂಚನೆ: ಖತರ್ನಾಕ್ ಆರೋಪಿ ಅರೆಸ್ಟ್!

0
Spread the love

ಬೆಂಗಳೂರು:- ನಾನು ಪ್ರಧಾನಿ ಕಚೇರಿ ಅಧಿಕಾರಿ ಹಾಗೂ ಅಮಿತ್‌ ಶಾ ದತ್ತು ಪುತ್ರ ಎಂದು ಕಾಶ್ಮೀರದ ವೈದ್ಯರೊಬ್ಬರಿಗೆ ಹಾಗೂ ರಾಜಕಾರಣಿಗಳಿಗೆ ಕೋಟ್ಯಂತರ ರೂ. ಹಣ ವಂಚಿಸಿದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Advertisement

ಸುಜಯ್ ಅಲಿಯಾಸ್ ಸುಜಯೇಂದ್ರ ಬಂಧಿತ ಆರೋಪಿ. ಈತ ವಿಜಯನಗರ ನಿವಾಸಿ ಎನ್ನಲಾಗಿದೆ. ಈತ ಅಮಿತ್‌ ಶಾ ದತ್ತು ಪುತ್ರ ಎಂದು ಹೇಳಿಕೊಂಡು ರಾಜಕಾರಣಿಗಳಿಗೂ ಯಾಮಾರಿಸಿದ್ದ. ಅಲ್ಲದೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದ. ಈಗ ಈತ ಪೊಲೀಸರ ಅತಿಥಿಯಾಗಿದ್ದಾನೆ.

ಏನು ಕೆಲಸವೂ ಇಲ್ಲದ ಸುಜಯೇಂದ್ರ ಎಲ್ಲರ ಬಳಿಯೂ ಕೇಂದ್ರ ಸರ್ಕಾರ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಅದೇ ರೀತಿ ಜಮ್ಮು ಕಾಶ್ಮೀರದ ವೈದ್ಯರೊಬ್ಬರ ಬಳಿ ದೇವನಹಳ್ಳಿಯ ಬಳಿಯಲ್ಲಿ ಆಯುರ್ವೇದ ಹಾಸ್ಪಿಟಲ್ ತೆರಲು ಅವಕಾಶ ಮಾಡಿಕೊಡ್ತೀನಿ ಅಂತ 2.7 ಕೋಟಿ ಹಣವನ್ನು ವಸೂಲಿ ಮಾಡಿದ್ದಾನೆ.

ಈ ಸಂಬಂಧ ದೂರು ದಾಖಲಿಸಿ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಜಯೇಂದ್ರ ಬಂಧನದ ಬಳಿಕ ಆತನ ಅಸಲಿಯತ್ತು ಅನಾವರಣ ಆಗಿದೆ. ಸುಜಯೇಂದ್ರ ಈಗಾಗಲೇ ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದ. ಅಲ್ಲದೇ 4 ಚೆಕ್ ಬೌನ್ಸ್ ಕೇಸ್ ಇದ್ದಾವೆ ಅನ್ನೋದು ತನಿಖೆ ವೇಳೆ ತಿಳಿದುಬಂದಿದೆ.


Spread the love

LEAVE A REPLY

Please enter your comment!
Please enter your name here