ರಾಜ್ಯ ರಾಜಧಾನಿಯನ್ನು ಬೆಚ್ಚಿ ಬೀಳಿಸಿದ ಘಟನೆ: ಬೆಂಗಳೂರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ

0
Spread the love

ಬೆಂಗಳೂರು: ಒಂದು ತಿಂಗಳ ಹಿಂದೆಯಷ್ಟೇ ನಗರದ ಕೆ.ಆರ್‌ ಮಾರ್ಕೆಟ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಘಟನೆ ನಡೆದಿತ್ತು. ಇದೀಗ ಿಂತಹದ್ದೆ ಮತ್ತೊಂದು ಘಟನೆ ನಡೆದಿದೆ. ಬೆಂಗಳೂರಿನ ಕೋರಮಂಗಲ ಸಮೀಪ ಇರುವ ಖಾಸಗಿ ಕಾಲೇಜು ಬಳಿ ಮಹಿಳೆಯೋರ್ವಳು ಬರುತ್ತಿದ್ದಾಗ,

Advertisement

ಅಲ್ಲೇ ಹೋಟೆಲ್ ನಲ್ಲಿ ಕೆಲಸ ಮಾಡುವ ನಾಲ್ವರು ಸಿಬ್ಬಂದಿಗಳು ಮಹಿಳೆಯನ್ನು ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಸುಮಾರು ಮಧ್ಯರಾತ್ರಿ 12:30 ಗಂಟೆಗೆ ನಡೆದಿದೆ ಎನ್ನಲಾಗಿದ್ದು, ಮದ್ಯಪಾನ ಮಾಡಿ ಖಾಸಗಿ ರೂಮಿಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.

ಮಹಿಳೆಯನ್ನ ಅತ್ಯಾಚಾರ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದು, ತಕ್ಷಣ 112 ಕರೆ ಮಾಡಿ ದೂರು ನೀಡಿದ್ದಾಳೆ ಎನ್ನಲಾಗಿದೆ. ಸದ್ಯ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಮಹಿಳೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಕೂಡಾ ತನಿಖೆ ಆರಂಭಿಸಿದ್ದರಿ. ಅದರಂತೆ ಇದೀಗ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಶುರು ಮಾಡಿದ್ದಾರೆ ಎನ್ನಲಾಗಿದ್ದು, ಸಂತ್ರಸ್ಥ ಮಹಿಳೆಯಿಂದ ಹೇಳಿಕೆ ಪಡೆದು ಮೂರು ವಿಶೇಷ ತಂಡಗಳ ಕಾರ್ಯಾಚರಣೆ ಕೂಡಾ ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here