HomeGadag Newsಸ್ವರಚಿತ ಕವಿತೆಗಳ ಆಹ್ವಾನ

ಸ್ವರಚಿತ ಕವಿತೆಗಳ ಆಹ್ವಾನ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ ಗದಗ ಅರ್ಪಿಸುವ, ಹಾನಗಲ್ ಗುರುಕುಮಾರ ಮಹಾಸ್ವಾಮಿಗಳ, ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರ, ಪದ್ಮಭೂಷಣ ಡಾ. ಪಂ. ಪುಟ್ಟರಾಜ ಶಿವಯೋಗಿ ಕವಿ ಗವಾಯಿಗಳವರ ಕುರಿತಾಗಿ ರಚಿಸಿದ `ಕಲೆಗೆ ಕಣ್ಣಿತ್ತ ಪೂಜ್ಯರು’ 13ನೇ ರಾಜ್ಯ ಮಟ್ಟದ ಕವಿಗೋಷ್ಠಿಯನ್ನು ಮೇ 12ರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆಯ ಬಾಡ ಕ್ರಾಸ್‌ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಏರ್ಪಡಿಸಲಾಗಿದೆ.

ಪೂಜ್ಯತೃಯರ ಕುರಿತಾಗಿ ರಚಿಸಿದ ಸ್ವರಚಿತ ಕವನ ವಾಚನ ಮಾಡಲು ಆಸಕ್ತ ಕವಿಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಪೂಜ್ಯತೃಯರಲ್ಲಿ ಯಾರಾದರೂ ಒಬ್ಬರ ಕುರಿತು ರಚಿಸಿದ ಸ್ವರಚಿತ ಕವನ ಮಾತ್ರ ವಾಚಿಸಲು ಅವಕಾಶವಿರುತ್ತದೆ. ವಾಚಿಸಲಿರುವ ಒಂದು ಅಥವಾ ಮೂರು ಕವನಗಳನ್ನು ಕಳಿಸಿಕೊಟ್ಟು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಆಯ್ಕೆಯಾದ ಕವನಗಳ ಕವಿಗಳನ್ನು ಮಾತ್ರ ಆಹ್ವಾನಿಸಲಾಗುವುದು.

ಭಾಗವಹಿಸಿದ ಕವಿಗಳಿಗೆ ಅಭಿನಂದನಾ ಪತ್ರ, ಪುಸ್ತಕ ಕಾಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಗುವುದು.

ದೂರದ ಊರುಗಳಿಂದ ಬರುವ ಕವಿಗಳಿಗೆ ಊಟ ಮತ್ತು ಸಾಮೂಹಿಕ ವಸತಿ ಒದಗಿಸಲಾಗುವುದು. ಭಾಗವಹಿಸಲು ಆಸಕ್ತರು ತಮ್ಮ ಪೂರ್ಣ ಹೆಸರು,ಅಂಚೆ ವಿಳಾಸ ತಿಳಿಸಿ, ಗುಣಮಟ್ಟದ ಒಂದು ಭಾವಚಿತ್ರದೊಂದಿಗೆ ವಾಣಿ ಬಸವರಾಜ-ದಾವಣಗೆರೆ, ಮೊ-9902052121/ 9886717732 ವಾಟ್ಸಾಪ್ ಸಂಖ್ಯೆಗೆ ಕಳಿಸಿಕೊಡಬಹುದು. ಕರೆಗಳನ್ನು ಸ್ವೀಕರಿಸುವುದಿಲ್ಲ. ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ಏಪ್ರಿಲ್ 30 ಆಗಿದೆ ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಬಸಯ್ಯ ಪಂ.ಚರAತಿಮಠ ದಾವಣಗೆರೆ ಇವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img