ಬೀದರ್: ಬೀದರ್ ಗಡಿಯ ತೆಲಂಗಾಣದ ಜಹೀರಾಬಾದ್ ಬಳಿ ಭೀಕರ ಅಪಘಾತ ಸಂಭವಿಸಿ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಏಜಾಜ್ ಶೇಕ್ ಕಲಿಮೋದ್ದಿನ್(37) ಮೃತ ದುರ್ದೈವಿಯಾಗಿದ್ದು,
Advertisement
ಮತ್ತೊಬ್ಬ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೈದರಾಬಾದ್‌ನಿಂದ ಬೀದರ್‌ನ ಕಮಲನಗರದ ಕಡೆ ಬರುತ್ತಿದ್ದಾಗ ಲಾರಿ ಪಂಕ್ಚರ್ ಆಗಿ ರಸ್ತೆಯಲ್ಲಿ ನಿಂತಿತ್ತು.
ಈ ವೇಳೆ ನಿಂತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಬಂದು ಗುದ್ದಿದ್ದು, ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟದ್ದಾರೆ.