ಅಕ್ಕಿನೇನಿ ಕುಟುಂಬದ ಮತ್ತೊಂದು ಕುಡಿ ಅಖಿಲ್ ಶೀಘ್ರದಲ್ಲೇ ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದಾರೆ. ಇಲ್ಲಿಯವರೆಗೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿರುವ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಇತ್ತೀಚೆಗಷ್ಟೇ ಅಖಿಲ್ ಜೈನಾಬ್ ರಾವಡ್ಜಿ ಎಂಬ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿರುವ ನಾಗಾರ್ಜುನ ಮನೆಯಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಮಾರಂಭ ನಡೆಯಿತು.
ನಾಗಾರ್ಜುನಾ ಪುತ್ರ ನಾಗಚೈತನ್ಯ ಡಿಸೆಂಬರ್ ತಿಂಗಳಿನಲ್ಲಿ ಎರಡನೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸಮಂತಾ ಜೊತೆಗಿನ ವಿಚ್ಛೇದನದ ಬಳಿಕ ನಾಗಚೈತನ್ಯ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದರು. ಬಹುಭಾಷಾ ನಟಿ ಶೋಭಿಯಾ ಜೊತೆ ಸುತ್ತಾಡುತ್ತಿದ್ದ ನಾಗಚೈತನ್ಯ ಇಬ್ಬರ ಬಗ್ಗೆ ಗುಲ್ಲೆದಿದ್ದರೂ ಪ್ರತಿಕ್ರಿಯೆ ನೀಡಿರಲಿಲ್ಲ. ಕುಟುಂಬಸ್ಥರ ಎದುರು ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಅಧಿಕೃತವಾಗಿ ಅನೌನ್ಸ್ ಮಾಡಿದ್ದರು.
ಸದ್ಯ ಅಕ್ಕಿನೇನಿ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಅದ್ಧೂರಿಯಾ ಮಾಡುವುದಕ್ಕೆ ನಾಗಾರ್ಜುನ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇನ್ನೊಂದು ತಮ್ಮ ಎರಡನೇ ಪುತ್ರ ಅಖಿಲ್ ಅಕ್ಕಿನೇನಿಯ ನಿಶ್ಚಿತಾರ್ಥವನ್ನು ಮಾಡಿದ್ದಾರೆ. ಈ ಗ್ಯಾಪ್‌ನಲ್ಲಿ ಎರಡನೇ ಮಗನ ನಿಶ್ಚಿತಾರ್ಥದ ಖುಷಿಯನ್ನು ಹಂಚಿಕೊಂಡಿದ್ದಾರೆ.
ಒಂದ್ಕಡೆ ಮೊದಲನೇ ಮಗನ ಎರಡನೇ ಮದುವೆಗೆ ಸಿದ್ಧತೆಗಳು ನಡೆದಿವೆ. ಇನ್ನೊಂದು ಕಡೆ ಎರಡನೇ ಪುತ್ರನಿಗೆ ಎರಡನೇ ಬಾರಿ ನಿಶ್ಚಿತಾರ್ಥವನ್ನು ಮಾಡಲಾಗಿದೆ. ಈ ಮೂಲಕ ಅಕ್ಕಿನೇನಿ ಕುಟುಂಬದಲ್ಲಿ ಎರಡೆರಡು ಸಂಭ್ರಮಗಳು ಮನೆ ಮಾಡಿವೆ. ಒಂದ್ಕಡೆ ಮದುವೆ ಆಗಿದ್ದರೆ, ಇನ್ನೊಂದು ಕಡೆ ನಿಶ್ಚಿತಾರ್ಥ ನಡೆದಿದೆ.