HomeCrime Newsಛಾಯಾಗ್ರಾಹಕರ ಮೇಲಿನ ಹಲ್ಲೆಗೆ ಖಂಡನೆ

ಛಾಯಾಗ್ರಾಹಕರ ಮೇಲಿನ ಹಲ್ಲೆಗೆ ಖಂಡನೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ರೋಣ : ಇಲ್ಲಿನ ಶಿವಾಜಿ ನಗರದಲ್ಲಿ ವೃತ್ತಿಪರ ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯವಾಗಿದ್ದು, ಹಲ್ಲೆಗೊಳಗಾದ ಛಾಯಾಗ್ರಾಹಕರಿಗೆ ನ್ಯಾಯ ಒದಗಿಸಬೇಕು ಎಂದು ತಾಲೂಕಾ ಛಾಯಾಗ್ರಾಹಕರ ಸಂಘಟನೆಯ ಪದಾಧಿಕಾರಿಗಳು ಉಪತಹಸೀಲ್ದಾರ ಮೀನಾ ರತ್ನಾಕರ್‌ರವರಿಗೆ ಮನವಿ ಸಲ್ಲಿಸಿದರು.

ಎಂ.ಜಿ. ಮಂಗಳೂರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಛಾಯಾಗ್ರಾಹಕರು ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದ್ದು, ಛಾಯಾಗ್ರಾಹಕರನ್ನು ರಸ್ತೆಗಳಲ್ಲಿ ತಡೆದು ಪರಿಕರಗಳನ್ನು ಕಿತ್ತುಕೊಳ್ಳುವ ಘಟನೆಗಳೂ ನಡೆದಿವೆ. ಹೀಗಾಗಿ, ವೃತ್ತಿಪರ ಛಾಯಾಗ್ರಾಹಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಹಾಗೂ ಹಲ್ಲೆಗೊಳಗಾದ ಛಯಾಗ್ರಾಹಕರಿಗೆ ಈ ಕೂಡಲೇ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಬಸವರಾಜ ಪಲ್ಲೇದ, ಪ್ರಭುಗೌಡ ಪಾಟೀಲ, ಎನ್.ಎಸ್. ಕಾಶಪ್ಪನವರ, ಎಸ್.ಸಿ. ರೆಡ್ಡೆರ, ಕಿರಣ ಮಿಸ್ಕೀನ್, ಪಿ.ಎಸ್. ಪಾಟೀಲ, ಎಂ.ಸಿ. ಕುಲಕರ್ಣಿ, ಶಿವಕುಮಾರ ತಿಪಶೆಟ್ರ, ಶರಣಪ್ಪ ಮಡಿವಾಳರ, ವಿರೇಶ ವಡ್ಡಿನ, ಶ್ರೀಶೈಲ ಚೆನ್ನಪ್ಪಗೌಡ್ರ, ಎಸ್.ಹಿರೇಮಠ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img