Bangalore: ಬೆಂಗಳೂರಿನಲ್ಲಿ ವ್ಯಕ್ತಿ ಬಳಿ ಹ್ಯಾಂಡ್‌ ಗ್ರೇನೇಡ್‌ ಪತ್ತೆ..!

0
Spread the love

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಓರ್ವ ವ್ಯಕ್ತಿ ಬಳಿ  ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿರುವ ಘಟನೆ ಸಂಪಿಗೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಬ್ದುಲ್ ರೆಹಮಾನ್ ಎಂಬಾತನ ಬ್ಯಾಗ್ ನಲ್ಲಿ ಪತ್ತೆಯಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ತನಗೆ ಗೊತ್ತಿಲ್ಲಾ, ರಸ್ತೆ ಬದಿ ಸಿಕ್ಕಿತ್ತು ಎಂದು ಆರೋಪಿ ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ. ಸದ್ಯ ಅಬ್ದುಲ್ ರೆಹಮಾನ್ ವಶಕ್ಕೆ ಪಡೆದಿರೋ ಸಂಪಿಗೆಹಳ್ಳಿ ಪೊಲೀಸರು, ಹ್ಯಾಂಡ್ ಗ್ರೆನೇಡ್ ವಶಕ್ಕೆ ಪಡೆದಿದ್ದಾರೆ.

ಇನ್ನೂ ಈ ಘಟನೆ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಡಿಟೋನೇಟರ್ ತಂತ್ರಜ್ಞಾನದಿಂದ ತಯಾರಾಗುವ ಸ್ಪೋಟಕವೇ ಗ್ರೆನೇಡ್. ಇದು ಸೇಫ್ಟಿ ಫಿನ್ ಅಥವಾ ಕಾಟರ್ ಪಿನ್​​​ನಿಂದ ನಿಯಂತ್ರಿಸಲ್ಪಡುತ್ತದೆ.

 


Spread the love

LEAVE A REPLY

Please enter your comment!
Please enter your name here