ಬೆಳಗಾವಿ: ದೇವಸ್ಥಾನ ಕಟ್ಟೆಯ ಮೇಲೆ ಮಲಗಿದ್ದ ವ್ಯಕ್ತಿಯನ್ನು ಅಟ್ಟಾಡಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ಮಮದಾಪುರ ಗ್ರಾಮದಲ್ಲಿ ನಡೆದಿದೆ. ಮಡ್ಡೆಪ್ಪ ಯಲ್ಲಪ್ಪ ಬಾನಸಿ (47) ಮೃತ ದುರ್ಧೈವಿಯಾಗಿದ್ದು, ಭೀರಪ್ಪ ಸಿದ್ದಪ್ಪ ಸುಣಧೋಳಿ ಕೊಲೆ ಆರೋಪಿಯಾಗಿದ್ದಾರೆ.
ಮಮದಾಪುರ ಗ್ರಾಮದ ಭೀರಸಿದ್ದೇಶ್ವರ ದೇವಸ್ಥಾನದ ಕಟ್ಟೆಯ ಮೇಲೆ ಮಲಗಿದ್ದಾಗಲೆ ಮಡ್ಡೆಪ್ಪನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಭಯಾನಕ ಕೊಲೆ ದೃಶ್ಯ ಸೆರೆಯಾಗಿದೆ. ಜಮೀನಿನ ಸೀಮೆ ಜಾಗಕ್ಕಾಗಿ ಹಲವು ವರ್ಷಗಳಿಂದ ಮಡೆಪ್ಪ-ಭೀರಪ್ಪ ಮಧ್ಯೆ ಗಲಾಟೆ ಇತ್ತು. ಜಮೀನಿನ ಸೀಮೆಗೆ ಕಲ್ಲು ಇರಿಸಿದ್ದನ್ನು ಮಡ್ಡೆಪ್ಪ ತೆರವುಗೊಳಿಸಿದ್ದ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಭೀರಪ್ಪನಿಗೆ ಮಡ್ಡೆಪ್ಪ ಬೆದರಿಕೆ ಹಾಕಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಭೀರಪ್ಪನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಆರೋಪಿ ಭೀರಪ್ಪನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.