Home Karnataka News ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳಾ ಪಿಎಸ್ಐ ದುರ್ಮರಣ!

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳಾ ಪಿಎಸ್ಐ ದುರ್ಮರಣ!

0
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳಾ ಪಿಎಸ್ಐ ದುರ್ಮರಣ!
Spread the love

ಕೋಲಾರ:- ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳಾ ಪಿಎಸ್ಐ ದುರ್ಮರಣ ಹೊಂದಿದ ಘಟನೆ ಜಿಲ್ಲೆಯ ಕೆಜಿಎಫ್ ನಗರದಲ್ಲಿ ಜರುಗಿದೆ.

51 ವರ್ಷದ ಗಾಯತ್ರಿ ಕ್ಯಾನ್ಸರ್ಗೆ ಮೃತಪಟ್ಟ ಪಿಎಸ್ಐ. ಕಳೆದ 30 ವರ್ಷಗಳಿಂದ ಕೆಜಿಎಫ್ ಪೊಲೀಸ್ ಇಲಾಖೆಯಲ್ಲಿ ಗಾಯತ್ರಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತ ಗಾಯತ್ರಿ ಅವರು ಕೆಜಿಎಫ್ ನಗರದ ರಾಬರ್ಟ್‌ ಸನ್ ಪೇಟೆಯ ನಿವಾಸಿಯಾಗಿದ್ದಾರೆ. ಇನ್ನೂ 9 ವರ್ಷಗಳ ಸೇವಾವಧಿ ಇತ್ತು. ಕೆಜಿಎಫ್ ಎಸ್ಪಿ ಶಾಂತರಾಜು, ಡಿವೈಎಸ್ಪಿ ಪಾಂಡುರಂಗ ಸೇರಿದಂತೆ ಕೆಜಿಎಫ್ ಪೊಲೀಸರಿಂದ ಸಂತಾಪ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here