ಬಿಗ್ ಬಾಸ್ ಕನ್ನಡ ಸೀಸನ್ ಫಿನಾಲೆ ಸಮೀಪಿಸುತ್ತಿರುವ ಬೆನ್ನಲ್ಲೇ ವೀಕ್ಷಕರಿಗೆ ಮಹತ್ವದ ಅಪ್ಡೇಟ್ ಸಿಕ್ಕಿದೆ.
ಜಿಯೋ ಹಾಟ್ಸ್ಟಾರ್ನಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರದ ಸಮಯವನ್ನು ಬದಲಾವಣೆ ಮಾಡಲಾಗಿದೆ. ಈ ಕುರಿತು ನಿರೂಪಕ ಕಿಚ್ಚ ಸುದೀಪ್ ಅವರು ಪ್ರೋಮೋ ಮೂಲಕ ಮಾಹಿತಿ ನೀಡಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಈ ಬದಲಾವಣೆಯನ್ನು ಘೋಷಿಸಲಾಗಿದೆ.
ರಾತ್ರಿ 9:30ರ ಬದಲು 9 ಗಂಟೆಗೆ ಪ್ರಸಾರ:
ಈ ಮೊದಲು ವಾರದ ದಿನಗಳಲ್ಲಿ ಟಿವಿ ಹಾಗೂ ಜಿಯೋ ಹಾಟ್ಸ್ಟಾರ್ನಲ್ಲಿ ರಾತ್ರಿ 9:30ಕ್ಕೆ ಬಿಗ್ ಬಾಸ್ ಸಂಚಿಕೆ ಪ್ರಸಾರವಾಗುತ್ತಿತ್ತು. ವಾರಾಂತ್ಯದ ಸಂಚಿಕೆಗಳು ರಾತ್ರಿ 9 ಗಂಟೆಗೆ ಆರಂಭವಾಗುತ್ತಿದ್ದವು. ಇದೀಗ ವಾರದ ದಿನಗಳ ಒಟಿಟಿ ಪ್ರಸಾರದ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ರಾತ್ರಿ 9:30ರ ಬದಲು 9 ಗಂಟೆಗೆ ಜಿಯೋ ಹಾಟ್ಸ್ಟಾರ್ನಲ್ಲಿ ಎಪಿಸೋಡ್ ಪ್ರಸಾರವಾಗಲಿದೆ.
ಈ ಹೊಸ ಸಮಯವನ್ನು ಗಮನದಲ್ಲಿಟ್ಟುಕೊಂಡು ಸಂಚಿಕೆ ವೀಕ್ಷಿಸುವಂತೆ ಕಿಚ್ಚ ಸುದೀಪ್ ಅವರು ಪ್ರೋಮೋದಲ್ಲಿ ವೀಕ್ಷಕರಿಗೆ ತಿಳಿಸಿದ್ದಾರೆ.
ಯಾವಾಗ ಬೇಕಾದರೂ ಎಪಿಸೋಡ್ ವೀಕ್ಷಿಸಬಹುದು:
ನಿಗದಿತ ಸಮಯದಲ್ಲಿ ಸಂಚಿಕೆ ಪ್ರಸಾರವಾಗುವುದರ ಜೊತೆಗೆ, ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಕರಿಗೆ ತಮಗೆ ಅನುಕೂಲವಾದ ಸಮಯದಲ್ಲಿ ಎಪಿಸೋಡ್ ನೋಡುವ ಅವಕಾಶವೂ ಇದೆ. ಫಿನಾಲೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಪ್ರಸಾರದ ಸಮಯ ಬದಲಾವಣೆಯಾಗಿರುವುದು ಬಿಗ್ ಬಾಸ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಈ ಹಿಂದೆ ವೂಟ್ ಒಟಿಟಿ ವೇದಿಕೆ ಇದ್ದಾಗ ಟಿವಿ ಪ್ರಸಾರಕ್ಕೂ ಮೊದಲೇ ಬಿಗ್ ಬಾಸ್ ಸಂಚಿಕೆಗಳು ಒಟಿಟಿಯಲ್ಲಿ ಲಭ್ಯವಾಗುತ್ತಿದ್ದವು. ಆದರೆ ಜಿಯೋ ಹಾಟ್ಸ್ಟಾರ್ ಆರಂಭವಾದ ಬಳಿಕ ಟಿವಿ ಮತ್ತು ಒಟಿಟಿಯಲ್ಲಿ ಒಂದೇ ಸಮಯಕ್ಕೆ ಸಂಚಿಕೆ ಪ್ರಸಾರವಾಗುತ್ತಿತ್ತು. ಇದೀಗ ಮತ್ತೆ ಒಟಿಟಿ ಪ್ರಸಾರದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.









