RCB Vs MI ಪಂದ್ಯಕ್ಕೆ ಬೆಟ್ಟಿಂಗ್: ಇಬ್ಬರು ಅರೆಸ್ಟ್, 6.99 ಲಕ್ಷ ನಗದು ಸೇರಿ 3 ಮೊಬೈಲ್ ಸೀಜ್!

0
Spread the love

ಯಾದಗಿರಿ:- ಜಿಲ್ಲೆಯ ಶಹಾಪುರ ಪಟ್ಟಣದ ಮಡಿವಾಳೇಶ್ವರ ಏರಿಯಾದಲ್ಲಿ IPL ಬೆಟ್ಟಿಂಗ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಹೌದು, ಸೋಮವಾರ ನಡೆದ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಶಹಾಪುರ ಪೋಲಿಸರು ಅರೆಸ್ಟ್ ಮಾಡಿದ್ದಾರೆ.

Advertisement

ಪುಂಡಲೀಕ, ಹರಿಪ್ರಸಾದ್ ಬಂಧಿತರು. ಇವರುಗಳಿಂದ ಮೂರು ಮೊಬೈಲ್ ಸೇರಿ 6.99 ಲಕ್ಷ ರೂ. ನಗದನ್ನು ಖಾಕಿ ಜಪ್ತಿ ಮಾಡಿದೆ. ಇನ್ಸ್ಪೆಕ್ಟರ್ ಎಸ್.ಎಂ.ಪಾಟೀಲ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಈ ಇಬ್ಬರು ದಂಧೆಕೋರರನ್ನು ಬಂಧಿಸಲಾಗಿದೆ. ಕ್ರಿಕ್365ಡೇ ಆಪ್‌ನಲ್ಲಿ ಇಬ್ಬರು ಬೆಟ್ಟಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here