ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಹತ್ತಿರವಾಗುತ್ತಿದೆ. ಇದೇ ಹೊತ್ತಲ್ಲಿ ಬಿಗ್ಬಾಸ್ ಮನೆಯಲ್ಲಿ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇದೀಗ 9 ಸ್ಪರ್ಧಿಗಳು ಸಖತ್ ಖುಷಿಯಲ್ಲಿದ್ದಾರೆ. ಇನ್ನೂ ಕಳೆದ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು.
ಅವರ ಪೈಕಿ ಐಶ್ವರ್ಯಾ ಸಿಂಧೋಗಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದರು. ಆದ್ರೆ ಈ ವಾರ ಬಿಗ್ಬಾಸ್ ಮನೆಯಿಂದ ಯಾವ ಸ್ಪರ್ಧಿಯೂ ಆಚೆ ಹೋಗುವುದಿಲ್ಲ. ಏಕೆಂದರೆ ಈ ವಾರ ಫ್ಯಾಮಿಲಿ ರೌಂಡ್ ಆಗಿದ್ದ ಕಾರಣ ನಾಮಿನೇಷನ್ ಪ್ರಕ್ರಿಯೆ ನಡೆದಿಲ್ಲ.
ಇಂದು ‘ಬಿಗ್ ಬಾಸ್’ನಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದೆ. ಇದಕ್ಕೆ ಮುತ್ತಿನ ಟಾಸ್ಕ್ ನೀಡಲಾಗಿತ್ತು. ಒಂದು ಕಡೆ ಲಿಪ್ಸ್ಟಿಕ್ ಇಡಲಾಗುತ್ತದೆ. ಅದನ್ನು ತುಟಿಗೆ ಹಚ್ಚಿಕೊಂಡು ಖಾಲಿ ಹಾಳೆಯ ಮೇಲೆ ಬಂದು ತುಟಿ ಅಚ್ಚನ್ನು ಮಾಡಬೇಕು.
ಹೀಗೆ ಯಾರು ಹೆಚ್ಚು ಕಿಸ್ಗಳನ್ನು ಕೊಡುತ್ತಾರೋ ಅವರೇ ವಿನ್ನರ್ ಅನಿಸುತ್ತೆ. ಅದಕ್ಕೆ ಹನುಮಂತು, ಧನರಾಜ್, ಚೈತ್ರಾ ನಾ ಮುಂದು ನೀ ಮುಂದು ಎನ್ನುವಂತೆ ಓಡೋಡಿ ಹೋಗಿ ಬೋರ್ಡ್ಗೆ ಕಿಸ್ಗಳನ್ನು ಕೊಟ್ಟಿದ್ದಾರೆ. ಈ ಟಾಸ್ಕ್ ಫನ್ ಆಗಿ ನಡೆದಿದೆ. ಎಲ್ಲಾ ಸ್ಪರ್ಧಿಗಳು ಇದನ್ನು ಎಂಜಾಯ್ ಮಾಡಿದ್ದಾರೆ.