‘ಬಿಗ್ ಬಾಸ್ ಕನ್ನಡ’ ಫ್ಯಾಮಿಲಿ ವೀಕ್ನಲ್ಲಿ ಸಂಭ್ರಮಕ್ಕಿಂತ ಹೆಚ್ಚು ನೋವು ಕಂಡುಬಂದಿದೆ. ಕಾವ್ಯ ಅವರು ತಮ್ಮ ತಾಯಿ ಮತ್ತು ಸಹೋದರರೊಂದಿಗೆ ನಡೆಸಿದ ಮಾತುಕತೆ ಇದೀಗ ದೊಡ್ಡ ಯಡವಟ್ಟಾಗಿ ಪರಿಣಮಿಸಿದೆ.
ಮನೆಯೊಳಗೆ ಕಾವ್ಯ, ಆಟದ ತಂತ್ರ, ನಾಮಿನೇಷನ್ ಪ್ಲಾನ್, ಗಿಲ್ಲಿಯ ಜೊತೆಗಿನ ಸ್ನೇಹ ಮತ್ತು ಸೋಷಿಯಲ್ ಮೀಡಿಯಾ ಇಮೇಜ್ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಿದ್ದಾರೆ.
‘ಎಲ್ಲಾ ಚೆನ್ನಾಗೇ ಇದೆ, ನೀನು ತಲೆ ಕೆಡಿಸಿಕೊಳ್ಳಬೇಡ. ಗಿಲ್ಲಿಯಿಂದಲೇ ನಿನಗೆ ಗುರುತು ಬಂದಿದೆ. ನಾಮಿನೇಷನ್ನಿಂದ ಅವನ ಹೆಸರನ್ನು ತೆಗೆದುಹಾಕು’ ಎಂದು ಸಹೋದರ ಸಲಹೆ ನೀಡಿದ್ದು, ತಾಯಿ ಕೂಡ ಬೆಂಬಲಿಸಿದ್ದಾರೆ.
ಆದರೆ ಈ ಮಾತುಗಳು ಬಿಗ್ ಬಾಸ್ ಮನೆಯ ಮೂಲ ನಿಯಮಗಳಿಗೆ ವಿರುದ್ಧವಾಗಿದ್ದರಿಂದ ಬಿಗ್ ಬಾಸ್ ತಕ್ಷಣವೇ ಕಠಿಣ ಕ್ರಮ ಕೈಗೊಂಡಿದ್ದಾರೆ. ಮನೆಯ ಮುಖ್ಯದ್ವಾರ ತೆರೆಯಿಸಿ, ಕಾವ್ಯ ಅವರ ಕುಟುಂಬದವರನ್ನು ಹೊರಗೆ ಕಳುಹಿಸುವಂತೆ ಆದೇಶ ನೀಡಿದ್ದಾರೆ.
ಕಾವ್ಯ ಎಷ್ಟೇ ಕ್ಷಮೆ ಕೇಳಿದರೂ ಬಿಗ್ ಬಾಸ್ ಮೃದುವಾಗಲಿಲ್ಲ. ಕುಟುಂಬದವರನ್ನು ಕಳೆದುಕೊಂಡ ನೋವಿನಲ್ಲಿ ಕಾವ್ಯ ಕಣ್ಣೀರಿಟ್ಟರು. ಫ್ಯಾಮಿಲಿ ವೀಕ್ನಲ್ಲೇ ಈ ಅಪ್ರತೀಕ್ಷಿತ ಘಟನೆ ಪ್ರೇಕ್ಷಕರಲ್ಲಿ ಶಾಕ್ ಮೂಡಿಸಿದೆ.



