ಬಿಗ್ ಬಾಸ್ ಸೀಸನ್ 12 ಕ್ಕೆ ಎದುರಾಗಿದ್ದ ಕಂಟಕ ನಿವಾರಣೆ ಆಗಿದ್ದು, ಒಂದು ದೊಡ್ಡ ಹೈಡ್ರಾಮಾಕ್ಕೆ ಫುಲ್ ಸ್ಟಾಪ್ ಬಿದ್ದಿದೆ.
ಬಂದ್ ಆಗಿದ್ದ ‘ಬಿಗ್ ಬಾಸ್’ ಮನೆಯ ಬಾಗಿಲು ಓಪನ್ ಆಗಿದೆ. ಕೆಲವು ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ‘ಬಿಗ್ ಬಾಸ್’ ಶೋ ಪುನರಾರಂಭಗೊಂಡಿದೆ.
ಬಿಗ್ ಬಾಸ್’ ಮನೆ ಬಂದ್ ಆದ್ಮೇಲೆ ಸ್ಪರ್ಧಿಗಳನ್ನ ಹತ್ತಿರದ ಖಾಸಗಿ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿತ್ತು. 24 ಗಂಟೆಗಳ ಕಾಲ ರೆಸಾರ್ಟ್‌ನಲ್ಲಿಯೇ ಸ್ಪರ್ಧಿಗಳು ವಾಸ್ತವ್ಯ ಹೂಡಿದ್ದರು. ರೆಸಾರ್ಟ್‌ನಲ್ಲೂ ‘ಬಿಗ್ ಬಾಸ್’ ಪ್ರೋಟೋಕಾಲ್‌ನ ಸ್ಪರ್ಧಿಗಳು ಕಟ್ಟುನಿಟ್ಟಾಗಿ ಫಾಲೋ ಮಾಡಿದ್ದರು. 24 ಗಂಟೆ ಬಳಿಕ ರೆಸಾರ್ಟ್‌ನಿಂದ ಸ್ಪರ್ಧಿಗಳು ಹೊರಬಂದಿದ್ದಾರೆ. ಸ್ಪರ್ಧಿಗಳ ನೇರವಾಗಿ ‘ಬಿಗ್ ಬಾಸ್’ ಮನೆಗೆ ತಂಡ ಕರೆದುಕೊಂಡು ಬಂದಿದೆ. ಗುರುವಾರ ಮಧ್ಯರಾತ್ರಿ ‘ಬಿಗ್ ಬಾಸ್’ ಮನೆಯನ್ನ ಸ್ಪರ್ಧಿಗಳು ಪುನಃ ಪ್ರವೇಶಿಸಿದ್ದಾರೆ.
ಕೆಲವು ಗಂಟೆಗಳ ಕಾಲ ‘ಬಿಗ್ ಬಾಸ್’ ಶೋ ಸ್ಥಗಿತಗೊಂಡಿತ್ತು. ಆದರೆ, 30 ಗಂಟೆಗಳ ಅಂತರದಲ್ಲಿ ‘ಬಿಗ್ ಬಾಸ್’ ಶೋ ಪುನರಾರಂಭಗೊಂಡಿದೆ. ಆಫ್ ಆಗಿದ್ದ ಲೈಟ್ಸ್ ಮತ್ತೆ ಆನ್ ಆಗಿದೆ. ಮುಚ್ಚಲಾಗಿದ್ದ ‘ಬಿಗ್ ಬಾಸ್’ ಮನೆಯ ಮುಖ್ಯದ್ವಾರ ಮತ್ತೆ ಓಪನ್ ಆಗಿದೆ. ಮಧ್ಯರಾತ್ರಿಯೇ ಸ್ಪರ್ಧಿಗಳು ‘ಬಿಗ್ ಬಾಸ್’ ಮನೆ ಪ್ರವೇಶಿಸಿದ್ದು, ಮತ್ತೆ ಆಟಕ್ಕೆ ಚಾಲನೆ ನೀಡಲಾಗಿದೆ.



