ಸರ್ದಾರ್ ಪಟೇಲರ ದೇಶಸೇವೆ ಸ್ಮರಣೀಯ : ತೋಟಪ್ಪ ಕುರುಡಗಿ

0
Birthday of Sardar Vallabhbhai Patel
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ಹಾಗೂ ಗದಗ ನಗರ ಬಿಜೆಪಿ ಘಟಕದ ವತಿಯಿಂದ ಸರ್ದಾರ ವಲ್ಲಭಭಾಯಿ ಪಟೇಲ್‌ರ ಹಾಗು ಬಿರಸಾ ಮುಂಡಾ ಅವರ 150ನೇ ಜನ್ಮದಿನ ಅಂಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಕರೆಯಂತೆ ಏಕತಾ ಓಟವನ್ನು ಗದಗ ನಗರದ ಬೂಮರೆಡ್ಡಿ ಸರ್ಕಲ್‌ನ ಪಂ. ಪುಟ್ಟರಾಜ ಕವಿಗವಾಯಿಗಳ ಪುತ್ಥಳಿಯ ಮುಂಭಾಗದಿಂದ ಆರಂಭಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತೊಂಟದಾರ್ಯ ಮಠದ ಮುಂಭಾಗದಲ್ಲಿ ಮುಕ್ತಾಯಗೊಳಿಸಿದರು.

Advertisement

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ಸರ್ದಾರ ವಲ್ಲಭಭಾಯಿ ಪಟೇಲರ ಕಾರ್ಯ, ದೇಶಸೇವೆ ಮತ್ತು ಅವರ ದಿಟ್ಟ ನಿರ್ಧಾರಗಳು ದೇಶದ ಏಕತೆಗೆ ಕಾರಣವಾಗಿದೆ ಎಂದು ಹೇಳಿದರು.

ಬಿಜೆಪಿ ನಗರಾಧ್ಯಕ್ಷ ಅನಿಲ ಅಬ್ಬಿಗೇರಿ ಮಾತನಾಡಿ, ವಲ್ಲಭಭಾಯಿ ಪಟೇಲರ ಜೀವನ ಚರಿತ್ರೆ ಮತ್ತು ಅವರು ದೇಶಕ್ಕೆ ಕೊಟ್ಟುಹೋಗಿರುವ ಅವರ ಜೀವನದ ಕತೆಯನ್ನು ಇಂದಿನ ಯುವ ಪೀಳಿಗೆ ಓದಿ, ಅರ್ಥೈಸಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಕ್ಕಿರೇಶ ರಟ್ಟಿಹಳ್ಳಿ, ಹಿರಿಯರಾದ ಎಂ.ಎಸ್. ಕರಿಗೌಡ್ರ, ಜಗನ್ನಾಥಸಾ ಭಾಂಡಗೆ, ತೋಟೊಸಾ ಭಾಂಡಗೆ, ಡಾ. ಶೇಖರ ಸಜ್ಜನರ, ಅಶೋಕ ಸಂಕಣ್ಣವರ, ವಿಜಯಕುಮಾರ ಗಡ್ಡಿ, ವಿನಾಯಕ ಮಾನ್ವಿ, ಕೆ.ಪಿ. ಕೊಟಿಗೌಡ್ರ, ನಿರ್ಮಲಾ ಕೊಳ್ಳಿ, ವಿಜಯಲಕ್ಷ್ಮಿ ಮಾನ್ವಿ, ಯೋಗೆಶ್ವರಿ ಭಾವಿಕಟ್ಟಿ, ಶಂಕರ ಕರಿಬಿಷ್ಠಿ, ಶಶಿಧರ ದಿಂಡೂರ, ಕಮಲಾಕ್ಷಿ ಗೊಂದಿ, ಸ್ವಾತಿ ಅಕ್ಕಿ, ಅಮರನಾಥ ಬೆಟಗೇರಿ, ಅಪ್ಪಣ್ಣ ಟೆಂಗಿನಕಾಯಿ, ಕೊನೆವಾಲಾ, ಜಯಶ್ರೀ ಅಣ್ಣಿಗೇರಿ, ಅಮರನಾಥ ಗಡಗಿ, ಮಂಜುನಾಥ ಶಾಂತಗೇರಿ, ಸುಧಿರ ಕಾಟಿಗರ, ಚಂದ್ರು ತಡಸದ, ನಾಗರಾಜ ತಳವಾರ, ಅಯ್ಯಪ್ಪ ಅಂಗಡಿ, ಶಂಕರ ಕಾಕಿ, ಕಾರ್ತಿಕ ಶಿಗ್ಲಿಮಠ, ರಾಹುಲ ಸಂಕಣ್ಣವರ, ರವಿ ಮಾನ್ವಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ವಲ್ಲಭಭಾಯಿ ಪಟೇಲರು ಕಾಶ್ಮೀರದ ವಿಷಯದಲ್ಲಿ 50 ರಾಜ ಮನೆತನಗಳ ಮನವೊಲಿಸಿ ಕಾಶ್ಮೀರವನ್ನು ಭಾರತದಲ್ಲಿ ಉಳಿಸಲು ಶ್ರಮವಹಿಸಿ ದೇಶದ ಅಖಂಡತೆ, ಐಕ್ಯತೆ, ಒಗ್ಗಟ್ಟನ್ನು ಕಾಪಾಡುವಲ್ಲಿ ಶ್ರಮಿಸಿದ್ದಾರೆಂದು ಹೇಳಿದರು.


Spread the love

LEAVE A REPLY

Please enter your comment!
Please enter your name here