ಮಂಡ್ಯ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಬೆಂಗಳೂರಿಗೆ ಬಂದಿದ್ದಾರೆ. ಶಾಸಕರ ಆಕ್ರೋಶ ಜ್ವಾಲೆ ಭುಗಿಲೇಳ್ತಿದ್ದಂತೆ ಎಚ್ಚೆತ್ತ ಹೈಕಮಾಂಡ್, ಸುರ್ಜೇವಾಲರನ್ನ ತುರ್ತತಾಗಿ ರವಾನಿಸಿದೆ. ಇದರ ಬೆನ್ನಲ್ಲೇ ಅವನ ಗ್ರಹಚಾರ ಚೆನ್ನಾಗಿತ್ತು ಸಿಎಂ ಆದ ಎಂದು ಸಿದ್ದರಾಮಯ್ಯ ವಿರುದ್ಧ ಶಾಸಕ ಬಿಆರ್ ಪಾಟೀಲ್ ಮಾಡತನಾಡಿರುವ ವಿಡಿಯೋ ವೈರಲ್ ಆಗಿದೆ.
ಹೌದು ಮಂಡ್ಯದ ಕೆಆರ್ ಪೇಟೆಯಲ್ಲಿ ಫೋನ್ನಲ್ಲಿ ಆಪ್ತರ ಜೊತೆ ಮಾತಾಡ್ತಿದ್ದ ಶಾಸಕ ಬಿಆರ್ ಪಾಟೀಲ್ ಅವರು, ಸಿದ್ದರಾಮಯ್ಯ ಲಕ್ಕಿ, ಲಾಟರಿ ಹೊಡೆದುಬಿಟ್ಟ. ಮುಖ್ಯಮಂತ್ರಿಯೂ ಆಗಿಬಿಟ್ಟ ಎಂದಿದ್ದಾರೆ.
ಅಲ್ಲದೇ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಅವರನ್ನ ಮೊದಲು ಭೇಟಿ ಮಾಡಿಸಿದವನು ನಾನೇ. ಅವನ ಗ್ರಹಚಾರ ಚೆನ್ನಾಗಿತ್ತು ಸಿಎಂ ಆದ. ಇದು ನನ್ನ ಗ್ರಹಚಾರ ಎಂದು ಪರೋಕ್ಷವಾಗಿ ಬಿಆರ್ ಪಾಟೀಲ್ ಬೇಸರ ಹೊರಹಾಕಿದ್ದಾರೆ.
ಕಾಂಗ್ರೆಸ್ ಹಿರಿಯ ಶಾಸಕ ಬಿ.ಆರ್ ಪಾಟೀಲ್ ದೂರವಾಣಿ ಮೂಲಕ ಆಪ್ತರೊಡನೆ ಮಾತುಕತೆ ನಡೆಸಿದ ವಿಡಿಯೋ ರೆಕಾರ್ಡ್ ಆಗಿದೆ. ನಮಗೆ ಗಾಡು ಇಲ್ಲ, ಫಾದರೂ ಇಲ್ಲ. ಸುರ್ಜೇವಾಲಾ ಅವರನ್ನ ಭೇಟಿಯಾಗಿ ಮಾತನಾಡಿದ್ದೇನೆ. ತುಂಬಾ ಗಂಭೀರವಾಗಿ ನನ್ನ ಮಾತುಗಳನ್ನ ಆಲಿಸಿದ್ದಾರೆ ಎಂದ್ರು.