ಶಿವಮೊಗ್ಗ:- ಆಟೋ ಚಾಲಕನೊಬ್ಬ ಇಲ್ಲಿನ ಸೋಗಾನೆಯಲ್ಲಿರುವ ಜೈಲಿಗೆ ಬಾಳೆಗೊನೆಗಳಲ್ಲಿ ಗಾಂಜಾ ತುಂಬಿ ತಂದು ಗೇಟಿನ ಬಳಿ ಇಟ್ಟು ಹೋಗಿರುವ ಘಟನೆ ಜರುಗಿದೆ.
Advertisement
ಕಳೆದ ನ.19ರ ಮದ್ಯಾಹ್ನ 02:15ಕ್ಕೆ ಆಟೋದಲ್ಲಿ ಐದು ಬಾಳೆಗೊನೆಗಳನ್ನು ಕಾರಾಗೃಹದ ಮುಂಭಾಗಕ್ಕೆ ತಂದು ಇಟ್ಟಿದ್ದಾನೆ. ಕ್ಯಾಂಟೀನ್‌ನವರ ಸೂಚನೆ ಮೇರೆಗೆ ತಂದಿರುವುದಾಗಿ ತಿಳಿಸಿ ತೆರಳಿದ್ದಾನೆ. ಬಳಿಕ ಕಾರಾಗೃಹದ ಮುಖ್ಯ ದ್ವಾರದ ಉಸ್ತುವಾರಿಯಲ್ಲಿದ್ದ ಕೆ.ಎಸ್.ಐ.ಎಸ್.ಎಫ್ ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಪ್ರೊಬೆಶನರಿ ಪಿಎಸ್ಐ ಪ್ರಭು ಎಸ್. ಹಾಗೂ ಸಿಬ್ಬಂದಿ ಬಾಳೆಗೊನೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ವೇಳೆ ಬಾಳೆಗೊನೆಯ ದಿಂಡನ್ನು ಕೊರೆದು ಅದರೊಳಗೆ ಗಾಂಜಾ ಹಾಗೂ ಸಿಗರೇಟನ್ನು ಟೇಪ್‌ನಲ್ಲಿ ಸುತ್ತಿ ಇಟ್ಟಿರುವುದು ಪತ್ತೆಯಾಗಿದೆ. ಅಧಿಕಾರಿಗಳು 123 ಗ್ರಾಂ ಗಾಂಜಾ ಮತ್ತು 40 ಸಿಗರೇಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.


