HomeKarnataka Newsಲಂಚ ಕೊಟ್ರೂ ಆಗದ ಕೆಲಸ: ಹೆಂಡ್ತಿ ಸರ ಅಡವಿಟ್ಟು ದುಡ್ಡು ಕೊಟ್ಟಿದ್ದ ಗಂಡ.! ತಹಸೀಲ್ದಾರ್ ಮುಂದೆ...

ಲಂಚ ಕೊಟ್ರೂ ಆಗದ ಕೆಲಸ: ಹೆಂಡ್ತಿ ಸರ ಅಡವಿಟ್ಟು ದುಡ್ಡು ಕೊಟ್ಟಿದ್ದ ಗಂಡ.! ತಹಸೀಲ್ದಾರ್ ಮುಂದೆ ಕಣ್ಣೀರು!

For Dai;y Updates Join Our whatsapp Group

Spread the love

ಹಾವೇರಿ:- ಹಾವೇರಿ ತಾಲ್ಲೂಕಿನ ಬೆಳವಗಿ ಗ್ರಾಮದಲ್ಲಿ ಲಂಚಬಾಕುರ ಸರ್ಕಾರಿ ನೌಕರನಿಗೆ ಲಂಚ ಕೊಡಲು ಗಂಡನೋರ್ವ ಹೆಂಡ್ತಿಯ ಮಾಂಗಲ್ಯ ಸರ ಅಡವಿಟ್ಟ ಘಟನೆ ಜರುಗಿದೆ. ಮಹಾಂತೇಶ ಬಡಿಗೇರ ಎಂಬುವವರೇ ತಮ್ಮ ಪತ್ನಿ ಮಾಂಗಲ್ಯ ಸರವನ್ನು ಅಡವಿಟ್ಟ ಗಂಡ.

ನೆರೆ ಸಂತ್ರಸ್ತರ ವಸತಿ ಯೋಜನೆಯಡಿ ಬಿಲ್ ನೀಡಲು ಸರ್ಕಾರಿ ನೌಕರ ಹಣಕ್ಕೆ ಬೇಡಿಕೆ ಇಟ್ಟ ಹಿನ್ನಲೆ ಮಹಾಂತೇಶ ಬಡಿಗೇರ ಎಂಬುವವರು ತಮ್ಮ ಪತ್ನಿ ಮಾಂಗಲ್ಯ ಸರವನ್ನು ಅಡವಿಟ್ಟು ಹಣ ನೀಡಿದ್ದಾರೆ. ಆದರೆ ಇದುವರೆಗೂ ಬಿಲ್ ಮಂಜೂರಾಗಿಲ್ಲ ಎಂದು ತಹಶೀಲ್ದಾರ್ ಬಳಿ ಅಳಲು ತೊಡಿಕೊಂಡಿದ್ದಾರೆ.

ಬೆಳವಿಗೆ ಗ್ರಾಮದ ಮಹಾಂತೇಶ್​, ಸಾಲ ಮಾಡಿ ಮನೆ ಕಟ್ಟಿದ್ದರಿಂದ ಬಿಲ್ ಅನಿವಾರ್ಯವಾಗಿತ್ತು. ಹೀಗಾಗಿ ಪತ್ನಿಯ ಮಾಂಗಲ್ಯ ಸರವನ್ನು ಅಡವಿಟ್ಟು ನೌಕರ ಮದನ್ ಮೋಹನ್‌ಗೆ 20 ಸಾವಿರ ರೂ ಲಂಚ ನೀಡಿದ್ದಾರೆ. ಆದರೆ ಇದುವರೆಗೂ ಬಿಲ್ ಮಂಜೂರಾಗಿಲ್ಲ. ಈ ಬಗ್ಗೆ ತಹಶೀಲ್ದಾರ್ ಶರಣಮ್ಮ ಅವರನ್ನು ಭೇಟಿಯಾಗಿ ಅಳಲು ತೊಡಿಕೊಂಡಿದ್ದು, ಜೊತೆಗೆ ದೂರು ಸಹ ನೀಡಿದ್ದಾರೆ.

ಸಂತ್ರಸ್ತನ ದೂರಿಗೆ ಸ್ಪಂದಿಸಿದ ತಹಶೀಲ್ದಾರ್ ಶರಣಮ್ಮ, ಹಣ ನೀಡಿರುವ ದಾಖಲೆಗಳನ್ನು ನನಗೆ ನೀಡಿ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ. ನೌಕರನ ವಿರುದ್ಧ ಕಠಿಣ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!