HomePolitics Newsಬಿಎಸ್‌ವೈ ಜನ್ಮದಿನ ಆಚರಣೆ

ಬಿಎಸ್‌ವೈ ಜನ್ಮದಿನ ಆಚರಣೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ 81ನೇ ಜನ್ಮದಿನವನ್ನು ಬಿಜೆಪಿ ಪಕ್ಷದಿಂದ ಮಂಗಳವಾರ ಪಟ್ಟಣದಲ್ಲಿ ಆಚರಿಸಲಾಯಿತು. ಬೆಳಿಗ್ಗೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು ಜಿ.ಎಫ್. ಉಪನಾಳ ಪ್ರತಿಷ್ಠಾನದ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಹಣ್ಣು-ಹಂಪಲು ವಿತರಿಸಿದರು.

ಶಿರಹಟ್ಟಿ ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಮಾತನಾಡಿ, ಬಡವರ ಬಂಧು, ರೈತ ನಾಯಕ ಮಾಜಿ ಸಿಎಂ ಬಿ.ಎಸ್.ವೈ ಈ ನಾಡು ಕಂಡ ಅಪ್ರತಿಮ ನಾಯಕರಾಗಿದ್ದಾರೆ. ಬಿಜೆಪಿ ಪಕ್ಷವನ್ನು ಕೆಳ ಹಂತದಿಂದ ಸಂಘಟಿಸಿ ಇಂದು ರಾಷ್ಟಮಟ್ಟಕ್ಕೇರಿಸುವಲ್ಲಿ ಇವರ ಪಾತ್ರ ಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿ.ಡಿ. ಪಲ್ಲೇದ, ನೀಲಪ್ಪ ಹತ್ತಿ, ನಿಂಗಪ್ಪ ಬನ್ನಿ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ವಿಜಯ ಕುಂಬಾರ, ಪ್ರವೀಣ ಬೋಮಲೆ, ರುದ್ರಪ್ಪ ಉಮಚಗಿ, ಶಕ್ತಿ ಕತ್ತಿ, ನವೀನ ಬೆಳ್ಳಟ್ಟಿ, ವುಳವೇಶ ಪಾಟೀಲ, ಪ್ರಕಾಶ ಉಪನಾಳ, ಸಂತೋಷ ಜಾವೂರ, ವಿಶಾಲ ಬಟಗುರ್ಕಿ, ವಿರೇಶ ಸಾಸಲವಾಡ, ಭೀಮಣ್ಣ ಯಂಗಾಡಿ, ಮಂಜುನಾಥ ಉಳ್ಳಾಗಡ್ಡಿ, ಜಹೀರ್ ಮೋಮಿನ್, ಮಲ್ಲಿಕಾರ್ಜುನ ನೀರಾಲೋಟಿ, ಈರಣ್ಣ ಅಕ್ಕೂರ, ಬಸವರಾಜ ಚಕ್ರಸಾಲಿ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img