Homecultureಶಿವರಾತ್ರಿ ಹಬ್ಬದ ಪ್ರಯುಕ್ತ ವ್ಯಾಪಾರ ಜೋರು

ಶಿವರಾತ್ರಿ ಹಬ್ಬದ ಪ್ರಯುಕ್ತ ವ್ಯಾಪಾರ ಜೋರು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ ಗಜೇಂದ್ರಗಡ : ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದ ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ ಜೋರಾಗಿತ್ತು. ಶಿವನಿಗೆ ಬೇಕಾದ ಹೂವು, ಹಣ್ಣು ಸೇರಿಂದತೆ ನಾನಾ ವಸ್ತುಗಳ ಖರೀದಿಯಲ್ಲಿ ಜನತೆ ನಿರತರಾಗಿದ್ದರು.

ಶಿವನ ದೇವಾಲಯಗಳು ವಿಶೇಷ ಪೂಜೆ ಹಾಗೂ ಧಾರ್ಮಿಕ ಆಚರಣೆಗಳಿಗಾಗಿ ಸಜ್ಜಾಗಿದ್ದು, ಇದರ ಜೊತೆಗೆ ಮಾರುಕಟ್ಟೆಗಳಲ್ಲಿ ಹಬ್ಬದ ಸಾಮಾಗ್ರಿಗಳು ಸಾಕಷ್ಟು ಬಂದಿವೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮಲ್ಲಿಗೆ ಹೂವು, ಕನಕಾಂಬರ ಹಾಗೂ ಕಾಕಡ ಹೂವಿನ ಬೆಲೆ ಹೆಚ್ಚಾಗಿದ್ದು, ವರ್ತಕರು ಅಂಗಡಿಗಳ ಮುಂದೆ ಹಣ್ಣಿನ ವ್ಯಾಪಾರ ನಡೆಸಿದರು.

ಸಮೀಪದ ಕಾಲಕಾಲೇಶ್ವರ ದೇಗುಲ ಹಾಗೂ ಪಟ್ಟಣದ ವಿರೂಪಾಕ್ಷೇಶ್ವರ, ಮಾರ್ಕಂಡೇಶ್ವರ, ರಾಮಲಿಂಗೇಶ್ವರ ಮತ್ತು ಚಂದ್ರಮೌಳೇಶ್ವರ ದೇಗುಲವನ್ನು ಸ್ವಚ್ಛಗೊಳಿಸಿ ಶಿವರಾತ್ರಿ ಹಬ್ಬದ ದಿನ ಜಾಗರಣೆ ಮಾಡುವ ಭಕ್ತರ ಅನೂಕುಲಕ್ಕಾಗಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img