ಸಂಪುಟ ವಿಸ್ತರಣೆ: ಸಿಎಂ ಬದಲಾವಣೆ ಕುರಿತು ಮಾತನಾಡಲ್ಲ: ಸಚಿವ ರಾಮಲಿಂಗಾ ರೆಡ್ಡಿ

0
Spread the love

ರಾಮನಗರ: ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ ವಿಚಾರ ಯಾವುದನ್ನೂ ನಾನು ಮಾತನಾಡಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಕೊಟ್ಟಿದ್ದಾರೆ.

Advertisement

ರಾಮನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, “ಯಾರು ಏನು ಮಾತನಾಡಿದ್ದಾರೆ ಗೊತ್ತಿಲ್ಲ, ಆದರೆ ಎಲ್ಲರೂ ಶಾಂತವಾಗಿರಬೇಕು. ನಮ್ಮಲ್ಲಿ ಬಿಜೆಪಿಯಂತಹ ಬಣಗಳಿಲ್ಲ. ಪಕ್ಷದ ಒಳಗಿನ ವಿಷಯಗಳನ್ನು ನಾಲ್ಕು ಗೋಡೆಗಳ ಒಳಗೆ ಚರ್ಚಿಸಬೇಕು. ಮಾಧ್ಯಮಗಳ ಮುಂದೆ ಹೇಳಿದ್ರೆ ಅದು ವಿರೋಧಿಗಳಿಗೆ ಆಹಾರವಾಗುತ್ತದೆ” ಎಂದು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದರು.

ಆರ್‌ಎಸ್‌ಎಸ್ ಚಟುವಟಿಕೆಗಳ ಮೇಲೆ ಸರ್ಕಾರದ ಸರ್ಕ್ಯುಲರ್ ಹಾಗೂ ಹೈಕೋರ್ಟ್ ತಡೆ ವಿಚಾರಕ್ಕೂ ಸ್ಪಷ್ಟನೆ ನೀಡಿದ ಅವರು, “ಇದು ಹೊಸ ಸರ್ಕ್ಯುಲರ್ ಅಲ್ಲ. ಜಗದೀಶ್ ಶೆಟ್ಟರ್ ಸರ್ಕಾರದ ಕಾಲದಲ್ಲೇ ಶಾಲಾ–ಕಾಲೇಜು ಆವರಣದಲ್ಲಿ ಯಾವುದೇ ಸಂಘಟನೆಯ ಕಾರ್ಯಕ್ರಮ ನಿಷೇಧದ ಆದೇಶ ಹೊರಬಂದಿತ್ತು. ಈಗ ಅದನ್ನೇ ಮುಂದುವರಿಸಿದ್ದೇವೆ. ಇದು ಎಲ್ಲ ಪಕ್ಷಗಳು ಹಾಗೂ ಸಂಘಗಳಿಗೆ ಅನ್ವಯವಾಗುತ್ತದೆ” ಎಂದು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here