HomeGadag Newsಚನ್ನಮ್ಮನ ಉತ್ಸವ ಮೂರ್ತಿ ಮೆರವಣಿಗೆ

ಚನ್ನಮ್ಮನ ಉತ್ಸವ ಮೂರ್ತಿ ಮೆರವಣಿಗೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಸ್ವಾತಂತ್ರ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮನ 200ನೇ ವಿಜಯೋತ್ಸವ ಹಾಗೂ 246ನೇ ಜಯಂತ್ಯುತ್ಸವ ಕಾರ್ಯಕ್ರಮ ವಿಜಯೋತ್ಸವ ಸಮಿತಿ ಅಧ್ಯಕ್ಷ ಶಾಂತಣ್ಣ ಮುಳವಾಡ, ಗೌರವಾಧ್ಯಕ್ಷ ಅಶೋಕ ಸಂಕಣ್ಣವರ, ಯುವ ಘಟಕದ ಅಧ್ಯಕ್ಷ ಸಂಗಮೇಶ ಕವಳಿಕಾಯಿ ಹಾಗೂ ಗದಗ ಜಿಲ್ಲಾ ಪಂಚಮಸಾಲಿ ಸಮಾಜ ಬಾಂಧವರ ನೇತೃತ್ವದಲ್ಲಿ ಶ್ರೀ ರಾಯಚೋಟಿ ವೀರಭದ್ರೇಶ್ವರ ದೇವಸ್ಥಾನ ವಕ್ಕಲಗೇರಿಯಿಂದ ನೂತನವಾಗಿ ನಿರ್ಮಿಸಿದ ಚನ್ನಮ್ಮನ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವುದರೊಂದಿಗೆ ನೆರವೇರಿತು.

ಅನಿತಾ ಗಡ್ಡಿ, ಶಿವಲೀಲಾ ಅಕ್ಕಿ, ಜಯಶ್ರೀ ಉಗಲಾಟದ, ನೀಲಮ್ಮ ಬೋಳನವರ, ಸ್ವಾತಿ ಅಕ್ಕಿ ಹಾಗೂ ಮಾಧುರಿ ಮಾಳೆಕೊಪ್ಪ ನೇತೃತ್ವದಲ್ಲಿ ಡೊಳ್ಳು ವಾದ್ಯದ ಮೂಲಕ ಗದಗ-ಬೆಟಗೇರಿ ನಾಗಾವಿ ಹಾಗೂ ಹೊಸಳ್ಳಿ ಗ್ರಾಮದ ಮಹಿಳೆಯರು ಕುಂಭಮೇಳದೊಂದಿಗೆ ನಗರದ ಗುಜ್ಜರ ಬಸ್ತಿ ಪಂಚರಹೊಂಡ, ಬನ್ನಿಕಟ್ಟಿ ಮೂಲಕ ಹಾಯ್ದು ಚನ್ನಮ್ಮ ಸರ್ಕಲ್‌ನಲ್ಲಿ ಚನ್ನಮ್ಮ ಪುತ್ತಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಾಯವ್ಯ ಸಾರಿಗೆ ನಿಗಮದ ಮಾಜಿ ಅಧ್ಯಕ್ಷರಾದ ಎಂ.ಎಸ್ ಕರಿಗೌಡ್ರು, ಕೆ.ಕೆ. ಮಳಗೌಡ್ರು, ಬಿ.ಬಿ. ಕುರ್ತುಕೋಟಿ, ಬಿ.ಬಿ. ಸೂರಪ್ಪಗೌಡ್ರ, ರಾಜು ಕಮತರ, ಗುರುಶಾಂತಗೌಡ ಮರಿಗೌಡ್ರು, ಎಫ್.ವಿ. ಮರಿಗೌಡ್ರ, ಶಂಕರ ಕರಬಿಸ್ಟಿ, ಚೆನ್ನವೀರ ಮಳಗಿ, ರಾಜು ಕಮತರ ಮಂಜುನಾಥ್ ಗುಡದೂರು, ಬೂದಪ್ಪ ಅಂಗಡಿ, ಬಸವಣ್ಣೆಪ್ಪ ಚಿಂಚಲಿ, ನಿಂಗಪ್ಪ ಹುಗ್ಗಿ, ವಿರುಪಾಕ್ಷಪ್ಪ ಹೊಸಮನಿ, ರಾಮನಗೌಡ ದಾನಪ್ಪಗೌಡ್ರ, ವೀರಶೈವ ಮಹಾಸಭಾ ಅಧ್ಯಕ್ಷ ರಾಜು ಗುಡಿಮನಿ ಮುಂತಾದವರು ಉಪಸ್ಥಿತರಿದ್ದರು.

ತರುವಾಯ ನರಗುಂದ ಶಾಸಕ ಸಿ.ಸಿ. ಪಾಟೀಲರೊಂದಿಗೆ ಜಿಲ್ಲಾಡಳಿತ ಭವನದಲ್ಲಿ ನೆರವೇರಿದ ಸರ್ಕಾರಿ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚನ್ನಮ್ಮಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಗೌರವ ಸಲ್ಲಿಸಿದರು.

ಎಂ.ಎಸ್. ಚಿನ್ನೂರ ಗುರುಗಳು ಪ್ರಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ್ದ ವಿಜಯಕುಮಾರ್ ಗಡ್ಡಿ, ಶರಣು ಪಾಟೀಲ, ಕೃಷ್ಣಗೌಡ ಪಾಟೀಲ ಚನ್ನಮ್ಮಳ ಹೋರಾಟ ಹಾಗೂ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಲು ಕರೆ ನೀಡಿದರು.

ವೇದಿಕೆಯ ಮೇಲೆ ಗೌರವಾಧ್ಯಕ್ಷ ಅಶೋಕ ಸಂಕಣ್ಣವರ, ಅನಿಲ ಪಾಟೀಲ, ಈರಣ್ಣ ಕರಬಿಷ್ಠಿ, ಮಹೇಶ ಕರಬಿಷ್ಠಿ, ನಗರಸಭಾ ಸದಸ್ಯರಾದ ಅನಿತಾ ಗಡ್ಡಿ, ಮಹಾಂತೇಶ ನಲವಡಿ, ರವಿಕುಮಾರ ಕಮತರ, ಮೋಹನ ಮಾಳಶೆಟ್ಟಿ, ಸಿದ್ದಣ್ಣ ಪಲ್ಲೇದ, ಜಯಶ್ರೀ ಉಗಲಾಟದ, ಶಿವಲೀಲಾ ಅಕ್ಕಿ, ಸ್ವಾತಿ ಅಕ್ಕಿ ಪಾಲ್ಗೊಂಡಿದ್ದರು. ಸಂಗಮೇಶ ಕವಳಿಕಾಯಿ ವಂದಿಸಿದರು.

ನಂತರ ನಡೆದ ಮೆರವಣಿಗೆಯಲ್ಲಿ ಅಯ್ಯಪ್ಪ ಅಂಗಡಿ, ಬಸವರಾಜ ಗಡ್ಡೆಪ್ಪನವರ, ಅಮರನಾಥ ಬೆಟಗೇರಿ, ಕಿರಣ್ ಕಮತರ, ಚೇತನ್ ಅಬ್ಬಿಗೇರಿ, ರಾಜು ಜಕ್ಕನ್ ಗೌಡ್ರು, ಸಂತೋಷ ಕೊಪ್ಪದ, ರಮೇಶ ರೋಣದ, ಸಂತೋಷ್ ಕಬಾಡರ ಸಂತೋಷ್ ಅಕ್ಕಿ ಸೇರಿದಂತೆ ಜಿಲ್ಲೆಯ ಪಂಚಮಸಾಲಿ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img