HomePolitics Newsರಾಹುಲ್ ಗಾಂಧಿ ಹೋರಾಟದ ಫಲ: ಜನಗಣತಿಗೆ ಕೇಂದ್ರದಿಂದ ಅಧಿಸೂಚನೆ - ಸರ್ಕಾರದ ನಿರ್ಧಾರ ಸ್ವಾಗತಿಸಿದ ಬಿ.ಕೆ...

ರಾಹುಲ್ ಗಾಂಧಿ ಹೋರಾಟದ ಫಲ: ಜನಗಣತಿಗೆ ಕೇಂದ್ರದಿಂದ ಅಧಿಸೂಚನೆ – ಸರ್ಕಾರದ ನಿರ್ಧಾರ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್!

For Dai;y Updates Join Our whatsapp Group

ನವದೆಹಲಿ: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಜಾತಿಗಣತಿ ಜಾರಿಯಾದರೆ ಒಳ್ಳೆಯದು ಎಂದು ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಡೆಗೂ ರಾಹುಲ್ ಗಾಂಧಿಯವರ ಹೋರಾಟಕ್ಕೆ ಸ್ಪಂದಿಸಿ ಜನಗಣತಿ ಅಧಿಸೂಚನೆ ಆದೇಶ ಹೊರಡಿಸಿದ್ದಾರೆ. ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಯಾರೇ ಆದರೂ ಪ್ರಜಾಪ್ರಭುತ್ವದಲ್ಲಿ ಜನರ ಸ್ಥಿತಿಗತಿ ನೋಡಿಲ್ಲ ಎಂದರೆ ಕಾರ್ಯಕ್ರಮ ಕೊಡೋದು ಕಷ್ಟ. ರಾಹುಲ್ ಗಾಂಧಿಯವರ ನಿರಂತರ ಹೋರಾಟದ ಉದ್ದೇಶದ ಫಲವಾಗಿ ಕೇಂದ್ರ ಅಧಿಸೂಚನೆ ಹೊರಡಿಸಿದೆ ಅದಕ್ಕೆ ಸ್ವಾಗತ ಎಂದಿದ್ದಾರೆ.

1931ರಲ್ಲಿ ಜಾತಿಯನ್ನ ಸೇರಿಸಿದ್ದರು. ಸ್ವತಂತ್ರದ ಬಳಿಕ ಮೊದಲ ಬಾರಿಗೆ ಜಾತಿಯನ್ನ ಸೇರಿಸೋದು ಬಹಳ ಮುಖ್ಯವಾದದ್ದು, ರಾಹುಲ್‌ಯವರ ಬೇಡಿಕೆ ಕೂಡ ಅದೇ ಆಗಿತ್ತು. ಸ್ವತಂತ್ರದ ಬಳಿಕ ಯಾವ ಸ್ಥಿತಿಗತಿಯಲ್ಲಿದ್ದಾರೆ ಅನ್ನೋದು ತಿಳಿಯಲಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಜಾತಿಗಣತಿ ಜಾರಿಯಾದರೆ ಒಳ್ಳೆಯದು ಎಂದು ಹೇಳಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img