ಚಿನ್ನಸ್ವಾಮಿ ಕಾಲ್ತುಳಿತ: ಮೌನವಾಗಿ ನಮ್ಮ ಸಂಕಟ ಅನುಭವಿಸಿದ್ದೇವೆ – RCB ಭಾವುಕ ಪೋಸ್ಟ್!

0
Spread the love

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2025ರ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಬಳಿಕ ಅಭಿಮಾನಿಗಳ ಖುಷಿ ಎಷ್ಟಿತ್ತು ಅಂದ್ರೆ ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.

Advertisement

ಆದರೆ ಈ ಸಂಭ್ರಮ ಸಡಗರ ಹೆಚ್ಚು ಕ್ಷಣ ಉಳಿಯಲೇ ಇಲ್ಲ. ಅಂದು RCB ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ಕನ್ನಡಿಗರ ಸಂಭ್ರಮವನ್ನು ಕಿತ್ತು ಕೊಂಡಿತು. ಹೀಗಾಗಿ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಿಂದ ಭಾರೀ ನೋವು ಅನುಭವಿಸಿದ್ದ ಆರ್‌ಸಿಬಿ ಆಡಳಿತ ಮಂಡಳಿ ಈಗ ಅಭಿಮಾನಿಗಳಿಗಾಗಿ ಕೇರ್‌ ಸೆಂಟರ್‌ ತೆರೆಯಲು ಮುಂದಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಪೋಸ್ಟ್‌ ಮಾಡಿದ್ದು, ಚಿನ್ನಸ್ವಾಮಿ ಸ್ಟೇಡಿಯಂ ಒಂದು ಕಾಲದಲ್ಲಿ ಅಭಿಮಾನಿಗಳು ಹೆಚ್ಚು ಸಂಭ್ರಮದಿಂದ ಕಳೆದ ಸ್ಥಳ. ಆದರೆ ಜೂ.4ರಂದು ಸಂಭವಿಸಿದ ದುರ್ಘಟನೆಯಿಂದ ಆ ಸಂಭ್ರಮ ಮರೆಯಾಗಿದೆ. ಆ ದಿನ ನಮ್ಮ ಹೃದಯ ಚೂರಾಯಿತು. ಈ ಸಂಕಟವನ್ನು ನಾವು ಮೂರು ತಿಂಗಳ ಕಾಲ ಮೌನವಾಗಿ ಅನುಭವಿಸಿದ್ದೇವೆ.

ಈ ದುರ್ಘಟನೆಯಿಂದ ಸಾಕಷ್ಟು ಕಲಿತಿದ್ದೇವೆ. ಇದಕ್ಕಾಗಿಯೇ ನಾವು ಅಭಿಮಾನಿಗಳ ಜೊತೆ ನಿಲ್ಲಲು ನಿರ್ಧರಿಸಿದ್ದೇವೆ. ಇದೇ ಕಾರಣಕ್ಕೆ ಅಭಿಮಾನಿಗಳಿಗಾಗಿ ಕೇರ್‌ ಸೆಂಟರ್‌ ತೆರೆಯಲು ನಿರ್ಧರಿಸಲಾಗಿದೆ. ಈ ಮೂಲಕ ಕರ್ನಾಟಕದ ಹೆಮ್ಮೆಯಾಗಿ ಮುಂದುವರಿಯುತ್ತೇವೆ.‌ ಈ ಬಗ್ಗೆ ಹೆಚ್ಚಿನ ವಿವರ ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ ಎಂದು ಆರ್‌ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದೆ.


Spread the love

LEAVE A REPLY

Please enter your comment!
Please enter your name here