ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಸ್ವಚ್ಛತೆಗೆ ಅವಿರತವಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಗೌರವ, ಸೌಜನ್ಯ ಹಾಗೂ ಕಾಳಜಿ ತೋರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಪುರಸಭೆ ಕಾರ್ಯಾಲಯದಿಂದ ನಡೆದ 13ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರ ನೇಮಕಕ್ಕೆ ಸರ್ಕಾರ ಮುಂದಾಗಿದ್ದರ ಪರಿಣಾಮ ಮೊದಲ ಹಂತದಲ್ಲಿ 11 ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸಿದ್ದು, ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ 31 ಪೌರ ಕಾರ್ಮಿಕರನ್ನು ಖಾಯಂ ನೌಕರನ್ನಾಗಿ ನೇಮಕ ಮಾಡಲಾಗಿದೆ. ಕಾರ್ಮಿಕರ ಸಮಸ್ಯೆಗಳು ಹಾಗೂ ಬೇಡಿಕೆಗಳು ಚರ್ಚೆಗೆ ಬಂದ ಸಂದರ್ಭದಲ್ಲಿ ವಿಧಾನಸಭೆ ಸೇರಿ ಇತರ ಸ್ಥಳಗಳಲ್ಲಿ ನಿಮ್ಮ ಪರವಾಗಿ ಹೋರಾಟದ ಜತೆಗೆ ನಿಮ್ಮ ನ್ಯಾಯ ಸಮ್ಮತ ಬೇಡಿಕೆಗಳ ಈಡೇರಿಕೆಗೆ ಧ್ವನಿಗೂಡಿಸಿದ್ದೇನೆ ಎಂದರು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಪೌರ ಕಾರ್ಮಿಕರ ಸಂಘದ ಶಾಖಾಧ್ಯಕ್ಷ ಸಿ.ಡಿ. ದೊಡ್ಡಮನಿ, ಉಪಾಧ್ಯಕ್ಷ ಶಿವಪ್ಪ ಮಾದರ, ಮುಖಂಡರಾದ ಅಶೋಕ ಬಾಗಮಾರ, ಸಿದ್ದಪ್ಪ ಬಂಡಿ, ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ, ಉಮೇಶ ರಾಠೋಡ, ವೆಂಕಟೇಶ ಮುದಗಲ್, ರಫೀಕ್ ತೋರಗಲ್, ಮುದಿಯಪ್ಪ ಮುದೋಳ, ಬಸವರಾಜ ಹೂಗಾರ, ಮುತ್ತಣ್ಣ ಮ್ಯಾಗೇರಿ, ದ್ರಾಕ್ಷಾಯಿಣಿ ಚೋಳಿನ, ಶ್ರೀಧರ ಬಿದರಳ್ಳಿ, ಮುದಿಯಪ್ಪ ಮುಧೋಳ, ಶರಣಪ್ಪ ಬೆಟಗೇರಿ, ಅರಿಹಂತ ಬಾಗಮಾರ, ಅಧಿಕಾರಿಗಳಾದ ಬಿ.ಮಲ್ಲಿಕಾರ್ಜುನ, ಎಂ.ಎಂ. ತೋಟದ, ಪಿ.ಎನ್. ದೊಡ್ಡಮನಿ, ಜಿ.ಎನ್. ಕಾಳೆ, ಶಿವಕುಮಾರ ಇಲಾಳ, ಉಮಾ ಕುರಹಟ್ಟಿ ಸೇರಿ ಇತರರು ಇದ್ದರು.