HomeBengaluru Newsನಾಗಸಂದ್ರ ಮೆಟ್ರೊ ಸ್ಟೇಷನ್‌ ಬಳಿ ಕುಸಿದ ರಸ್ತೆ !

ನಾಗಸಂದ್ರ ಮೆಟ್ರೊ ಸ್ಟೇಷನ್‌ ಬಳಿ ಕುಸಿದ ರಸ್ತೆ !

For Dai;y Updates Join Our whatsapp Group

Spread the love

ಬೆಂಗಳೂರು:- ನಾಗಸಂದ್ರ ಮೆಟ್ರೊ ಸ್ಟೇಷನ್‌ ಪ್ರವೇಶ ದ್ವಾರದದ ಪಕ್ಕದಲ್ಲಿನ ರಸ್ತೆ ಕುಸಿದು ಗುಂಡಿ ನಿರ್ಮಾಣವಾಗಿದೆ. ಐದು ದಿನಗಳ ಹಿಂದೆ ಭಾರಿ ವಾಹನವೊಂದು ಈ ದಾರಿಯಲ್ಲಿ ಚಲಿಸಿದ ಮೇಲೆ ರಸ್ತೆ ಕುಸಿದಿದೆ. ಡಾಂಬರು ಸಹಿತ ಕುಸಿದಿದೆ.

ಇವತ್ತಿನವರೆಗೂ ಅದನ್ನು ದುರಸ್ತಿ ಮಾಡಿಲ್ಲ. ಬದಲಿಗೆ, ಗುಂಡಿಯ ಸುತ್ತ, ಕಲ್ಲು ಇಟ್ಟು, ದಾರ ಕಟ್ಟಲಾಗಿದೆ. ಇದರಿಂದ ಮೆಟ್ರೊ ರೈಲು ನಿಲ್ದಾಣಕ್ಕೆ ಬಂದು ಹೋಗುವವರಿಗೆ ತುಂಬಾ ತೊಂದರೆಯಾಗುತ್ತಿದೆ.

‘ನೀರಿನ ಸಂಪರ್ಕಕ್ಕಾಗಿ ಪೈಪ್ ಅಳವಡಿಸಲು ಈ ಭಾಗದಲ್ಲಿ ಗುಂಡಿ ತೆಗೆದಿದ್ದು, ಕಾಮಗಾರಿ ಮುಗಿದ ಮೇಲೆ ಸಮರ್ಪಕವಾಗಿ ಮುಚ್ಚಿ ರಸ್ತೆ ಮಾಡದ ಕಾರಣ, ಹೀಗೆ ಗುಂಡಿ ಬಿದ್ದಿದದೆ. ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು ಗುಂಡಿ ಮುಚ್ಚದೇ ನಿರ್ಲಕ್ಷ್ಯವಹಿಸಿದ್ದಾರೆ’ ಎಂದು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!