HomeGadag Newsಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಗದುಗಿನ ಹಿರಿಯ ವೈದ್ಯ ಡಾ.ಪ್ಯಾರಾಲಿ ನೂರಾನಿ ಮತ್ತು ಹಿಟೆನ್ ಫ್ಯಾನ್ ಕ್ಲಬ್ ಸದಸ್ಯರು ನಗರದ ಕ್ಲಾರ್ಕ್ಸ್ ಇನ್ ಹೊಟೆಲ್‌ನಲ್ಲಿ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದರು.

30 ವರ್ಷಗಳಿಗೂ ಹೆಚ್ಚು ಕಾಲ ಗುಣಮಟ್ಟದ ನಿರ್ವಹಣೆ ಮತ್ತು ಮಾಪನಾಂಕ ನಿರ್ಣಯದಲ್ಲಿ ಅಮೋಘ ಸೇವೆಗಾಗಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಇಂಜಿನಿಯರ್ ಎ.ದಾಸ್ ಗುಪ್ತಾರನ್ನು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜಿಮ್ಸ್ ಎಂಬಿಬಿಎಸ್ ವಿದ್ಯಾರ್ಥಿಗಳ ಫಲಿತಾಂಶಕ್ಕಾಗಿ ಜಿಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಅವರನ್ನು, 3 ಕಿಡ್ನಿ ಕಸಿ ಯಶಸ್ವಿಯಾಗಿ ನಿರ್ವಹಿಸಿದ ಮೂತ್ರಶಾಸ್ತ್ರಜ್ಞ ಮತ್ತು ಕಿಡ್ನಿ ಕಸಿ ಶಸ್ತ್ರಚಿಕಿತ್ಸಕ ಡಾ.ಅವಿನಾಶ ಓದುಗೌಡರ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಾ.ಶ್ರೀಧರ ಕುರುಡಗಿ ಮಾತನಾಡಿ, ದಾಸಗುಪ್ತ ಅವರ ಸಾಧನೆಗಳ ಬಗ್ಗೆ ಹೆಮ್ಮೆಯ ನುಡಿಗಳನ್ನಾಡಿದರು. ಡಾ. ರಾಧಿಕಾ ಕುಲಕರ್ಣಿ, ಡಾ. ಸಾದೀಖಾ ನೂರಾನಿ, ಡಾ. ಸುನಿತಾ ಕುರುಡಗಿ ಮತ್ತು ಡಾ. ಅನಿತಾ ಧರಣಾ ಅವರು ಡಾ. ಚಿತ್ರಾ ದಾಸ್‌ಗುಪ್ತಾ ಅವರನ್ನು ಸ್ವಾಗತಿಸಿದರು. ಸಮಾರಂಭದಲ್ಲಿ ಡಾ. ಉದಯ ಕುಲಕರ್ಣಿ, ಡಾ. ಪವಾಡಶೆಟ್ಟರ, ಡಾ. ಪ್ರಕಾಶ್ ಧರಣಾ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img