HomeGadag Newsಕೋಟ್ಪಾ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ

ಕೋಟ್ಪಾ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾ ಸಮೀಕ್ಷಣಾಧಿಕಾರಿಗಳಾದ ಡಾ. ವೆಂಕಟೇಶ ರಾಠೋಡ್ ಮಾರ್ಗದರ್ಶನದಲ್ಲಿ ನಗರದ ಸಿ.ಡಿ.ಓ ಜೈನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ತಂಬಾಕು ವ್ಯಸನದಿಂದಾಗುವ ದುಷ್ಟರಿಣಾಮ ಹಾಗೂ ಕೋಟ್ಪಾ ಕಾಯ್ದೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಗೋಪಾಲ ಸುರುಪುರ, ಶಾಲೆಯ ಮುಖ್ಯೋಪಾಧ್ಯಾಯೆ ಮಾಧುರಿ ಹಿರೇಮಠ, ಬಸಮ್ಮ ಚಿತ್ತರಗಿ, ಸಿ.ಡಿ.ಓ ಜೈನ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಂಬಾಕು ಸೇವನೆಯಿಂದ ಅದರಲ್ಲಿ ಇರುವ ನಿಕೋಟಿನ್ ಎಂಬ ರಾಸಾಯನಿಕ ವಸ್ತು ಮಾನವನ ದೇಹದಲ್ಲಿನ ನರಮಂಡಲವನ್ನು ದುರ್ಬಲ ಹಾಗೂ ಸಂಕುಚಿತಗೊಳಿಸಿ ದೇಹದ ಎಲ್ಲಾ ಅಂಗಗಳಿಗೆ ರಕ್ತ ಪೂರೈಕೆ ಮಾಡಲು ಅಡಚಣೆ ಉಂಟಾಗಿ ಅಂಗಗಳು ದುರ್ಬಲಗೊಂಡು ಹಾಳಾಗುತ್ತವೆ. ಇದರಿಂದ ಹೃದಯ ಸಂಬಂಧಿ ಖಾಯಿಲೆ, ಪ್ವಾರ್ಶವಾಯು, ಕ್ಯಾನ್ಸರ್, ಚರ್ಮ ಸುಕ್ಕುಗಟ್ಟುವುದು, ಕಣ್ಣಿನ ಪೊರೆ, ಗ್ಯಾಂಗ್ರಿನ್ ಇಂತಹ ಗಂಭೀರ ಖಾಯಿಲೆಗಳಿಗೆ ಬಲಿಯಾಗುತ್ತಿದ್ದು, ಪುರುಷರಲ್ಲಿ ನಪುಂಸಕತೆ, ಮಹಿಳೆಯರಲ್ಲಿ ನಿರ್ಜೀವ ಜನನ, ಅಕಾಲಿಕ ಜನನ, ಕಡಿಮೆ ತೂಕದ ಮಗು ಜನನ ಉಂಟಾಗುತ್ತದೆ ಎಂದು ಅರಿವು ಮೂಡಿಸಲಾಯಿತು.

LEAVE A REPLY

Please enter your comment!
Please enter your name here

E-Paper

E-paper

Must Read

spot_img