ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ 2025 ರ ಐಪಿಎಲ್ ಅನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೀಗ ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಣೆಯಾಗಿರುವುದರಿಂದ ಐಪಿಎಲ್ ದ್ವಿತೀಯಾರ್ಧ ನಾಳೆಯಿಂದ ಆರಂಭವಾಗಲಿದೆ. ಮೇ 10 ರಂದು ಅಮೇರಿಕಾದ ಮಧ್ಯಸ್ಥಿಕೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ಕದನ ವಿರಾಮ ಘೋಷಿಸಿವೆ. ಆದಾಗ್ಯೂ ಯಾವುದೇ ಸಂದರ್ಭದಲ್ಲೂ ಮತ್ತೆ ಸೇನಾ ಕಾರ್ಯಾಚರಣೆ ಶುರುವಾಗುವ ಆತಂಕವಿರುವ ಕಾರಣ ಈ ಮೊದಲು ನಿಗದಿಪಡಿಸಿದ್ದ ಸ್ಥಳಗಳಲ್ಲಿ ಉಳಿದ 16 ಪಂದ್ಯಗಳನ್ನು ನಡೆಸುವ ಸಾಧ್ಯತೆಗಳು ತೀರ ಕಡಿಮೆ.
ಮೇ 17 ರಿಂದ ಅಂದರೆ ನಾಳೆಯಿಂದ ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯದೊಂದಿಗೆ IPL ಮತ್ತೆ ಪ್ರಾರಂಭವಾಗುತ್ತಿದೆ. ಹೊಸ ವೇಳಾಪಟ್ಟಿಯ ಪ್ರಕಾರ ಉಳಿದ 17 ಪಂದ್ಯಗಳು 6 ಸ್ಥಳಗಳಲ್ಲಿ ನಡೆಯಲಿವೆ. ಹಾಗೆಯೇ ಫೈನಲ್ ಪಂದ್ಯವು ಜೂನ್ 3 ರಂದು ನಡೆಯಲಿದೆ.
ಉಳಿದ ಪಂದ್ಯಗಳನ್ನು ಬೆಂಗಳೂರು, ದೆಹಲಿ, ಲಕ್ನೋ, ಮುಂಬೈ, ಅಹಮದಾಬಾದ್ ಮತ್ತು ಜೈಪುರ ಸೇರಿದಂತೆ 6 ಸ್ಥಳಗಳಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಈ ಅವಧಿಯಲ್ಲಿ, ಉಳಿದ ಲೀಗ್ ಪಂದ್ಯಗಳನ್ನು ಮೇ 17 ರಿಂದ ಮೇ 25 ರವರೆಗೆ ಆಡಲಾಗುವುದು, ಇದರಲ್ಲಿ 2 ಡಬಲ್ ಹೆಡರ್ ಪಂದ್ಯಗಳು ಸೇರಿವೆ. ಅಂದರೆ ಒಂದೇ ದಿನ 2 ಪಂದ್ಯಗಳು ನಡೆಯಲಿದ್ದು, ಈ ಡಬಲ್ ಹೆಡರ್ ಪಂದ್ಯಗಳನ್ನು ಎರಡು ಭಾನುವಾರಗಳಂದು ನಡೆಸಲು ತೀರ್ಮಾನಿಸಲಾಗಿದೆ. ಇದಲ್ಲದೆ, ಪ್ಲೇಆಫ್ ಪಂದ್ಯಗಳು ಮೇ 29 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಆದರೆ ಲೀಗ್ ಪಂದ್ಯಗಳಿಗೆ ಸ್ಥಳಗಳನ್ನು ಪ್ರಕಟಿಸಿರುವ ಬಿಸಿಸಿಐ ಪ್ಲೇಆಫ್ ಪಂದ್ಯಗಳ ಸ್ಥಳಗಳನ್ನು ಇನ್ನೂ ನಿರ್ಧರಿಸಿಲ್ಲ. ಆದಾಗ್ಯೂ ಪ್ಲೇ ಆಫ್ ಪಂದ್ಯಗಳ ದಿನಾಂಕ ನಿಗದಿಯಾಗಿದ್ದು, ಕ್ವಾಲಿಫೈಯರ್ 1- ಮೇ 29 ರಂದು, ಎಲಿಮಿನೇಟರ್- ಮೇ 30 ರಂದು, ಕ್ವಾಲಿಫೈಯರ್ 2- ಜೂನ್ 1 ರಂದು ಮತ್ತು ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ.
ವೇಳಾಪಟ್ಟಿ ಹೀಗಿದೆ:-
ದಿನಾಂಕ:- 17-05-2025, ಆರ್‌ಸಿಬಿ vs ಕೆಕೆಆರ್ ಸಂಜೆ 7:30 (ಬೆಂಗಳೂರು).
18-05-2025 :- ರಾಜಸ್ಥಾನ vs ಪಂಜಾಬ್ ಮಧ್ಯಾಹ್ನ 3:30(ಜೈಪುರ).
18-05-2025 ಡೆಲ್ಲಿ vs ಗುಜರಾತ್ ಸಂಜೆ 7:30( ದೆಹಲಿ).
19-05-2025:- ಲಕ್ನೋ vs ಹೈದರಾಬಾದ್ ಸಂಜೆ 7:30 (ಲಕ್ನೋ).
20-05-2025 ಸಿಎಸ್ಕೆ vs ರಾಜಸ್ಥಾನ್ ಸಂಜೆ 7:30 (ದೆಹಲಿ).
21-05-2025:- ಮುಂಬೈ vs ಡೆಲ್ಲಿ ಸಂಜೆ 7:30( ಮುಂಬೈ).
22-05-2025 :- ಗುಜರಾತ್ vs ಲಕ್ನೋ ಸಂಜೆ 7:30 (ಅಹಮದಾದ್).
23-05-2025:- ಆರ್‌ಸಿಬಿ vs ಹೈದರಾಬಾದ್ ಸಂಜೆ 7:30 (ಬೆಂಗಳೂರು).
24-05-2025 ಪಂಜಾಬ್ vs ಡೆಲ್ಲಿ ಸಂಜೆ 7:30 (ಜೈಪುರ).
25-05-2025 :- ಗುಜರಾತ್ vs ಸಿಎಸ್ಕೆ ಮಧ್ಯಾಹ್ನ 3:30 (ಅಹಮದಾಬಾದ್).
25-05-2025 :-ಹೈದರಾಬಾದ್ vs ಕೋಲ್ಕತ್ತಾ ಸಂಜೆ 7:30 (ದೆಹಲಿ).
26-05-2025:- ಪಂಜಾಬ್ vs ಮುಂಬೈ ಸಂಜೆ 7:30( ಜೈಪುರ).
27-05-2025:- ಲಕ್ನೋ vs ಆರ್‌ಸಿಬಿ ಸಂಜೆ 7:30 (ಲಕ್ನೋ).
29-05-2025 :- ಕ್ವಾಲಿಫೈಯರ್ 1 ಸಂಜೆ 7:30 ಸ್ಥಳ (ನಿಗದಿ ಪಡಿಸಿಲ್ಲ).
30-05-2025:- ಎಲಿಮಿನೇಟರ್ ಸಂಜೆ 7:30 ಸ್ಥಳ (ನಿಗದಿ ಪಡಿಸಿಲ್ಲ).
01-06-2025 :- ಕ್ವಾಲಿಫೈಯರ್ 2 ಸಂಜೆ 7:30 ಸ್ಥಳ (ನಿಗದಿ ಪಡಿಸಿಲ್ಲ).
03-06-2025 ಫೈನಲ್ ಪಂದ್ಯ ಸಂಜೆ 7:30 ಸ್ಥಳ ( ನಿಗದಿ ಪಡಿಸಿಲ್ಲ).


