HomeGadag Newsನಗರಾಭಿವೃದ್ಧಿಯತ್ತ ಗಮನ ಹರಿಸಲು ಆಗ್ರಹ

ನಗರಾಭಿವೃದ್ಧಿಯತ್ತ ಗಮನ ಹರಿಸಲು ಆಗ್ರಹ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಇಲಕಲ್ : ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಇಲಕಲ್ ಘಟಕದ ವತಿಯಿಂದ ನಗರಾಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ನಗರಸಭೆಯ ಆಯುಕ್ತರಿಗೆ ಬೇಡಿಕೆ ಸಲ್ಲಿಸಿ, ಇಲ್ಲಿನ ನಾಗರಿಕರು ನೀರಿನ ಸಮಸ್ಯೆ, ಹದಗೆಟ್ಟ ರಸ್ತೆಗಳು ಹಾಗೂ ಸ್ವಚ್ಛತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಲಾಯಿತು.

ರಾಜ್ಯ ಕಾರ್ಯದರ್ಶಿ ರಿಜ್ವಾನ್ ಹುಮನಾಬಾದ್, ಜಿಲ್ಲಾ ಉಪಾಧ್ಯಕ್ಷ ಅಫ್ಜಲ್ ಹುಸೇನ್, ನಗರಾಧ್ಯಕ್ಷ ಸಿರಾಜ್ ಹುಣಚಗಿ, ನಗರ ಕಾರ್ಯದರ್ಶಿ ರಫೀಕ್ ಬಳಗಾನೂರ ಮತ್ತು ಮತ್ತಿತರರು ಉಪಸ್ಥಿತರಿದ್ದರು. ಅನ್ವರ್ ಢಾಲಾಯತ್, ಶಹಬಾಜ್ ಅಹ್ಮದ್, ಇರ್ಷಾದ್ ಮುಲ್ಲಾ, ಶೋಯೆಬ್, ಪರ್ವೇಜ್, ಶಂಸುದ್ದಿನ್ ಹಾಗೂ ಹಲವರು ಭಾಗವಹಿಸಿ, ಸಾರ್ವಜನಿಕ ಸಮಸ್ಯೆಗಳ ಪರಿಹಾರದ ಕುರಿತಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img