ಬೆಂಗಳೂರು: ಕನ್ನಡ ಕೇವಲ ಒಂದು ಭಾಷೆಯಾಗಿರದೆ, ಒಂದು ಜೀವಂತ ಸಂಸ್ಕೃತಿಯ ಪ್ರತೀಕವಾಗಿದೆ. ಕನ್ನಡಿಗರಿಗೆ ತಮ್ಮ ಭಾಷೆಯ ಮೇಲಿನ ಪ್ರೀತಿಯು ಗಾಢವಾದುದು ಮತ್ತು ಇದಕ್ಕೆ ಯಾವುದೇ ಅವಮಾನವಾದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಈ ಸಾಮರಸ್ಯದ ಸಂಸ್ಕೃತಿಗೆ ಧಕ್ಕೆ ತರುವ ಘಟನೆಗಳು ದಾಖಲಾಗುತ್ತಿವೆ.
ಇದೀಗ ಮತ್ತೊಮ್ಮೆ ಕನ್ನಡಿಗರಿಗೆ ಅವಮಾನವಾಗಿದೆ. ಹೌದು ಮಡಿವಾಳ ಪೊಲೀಸ್ ಠಾಣೆ ಲಿಮಿಟ್ಸ್ ನಲ್ಲಿ ಬರುವ ಕೋರಮಂಗಲದಲ್ಲಿರುವ ಜಿಎಸ್ ಸೂಟ್ಸ್ ಹೋಟೆಲ್ ಡಿಸ್ಪ್ಲೇ ಬೋರ್ಡ್ನಲ್ಲಿ ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿ ಅವಮಾನ ಮಾಡಿರು ಘಟನೆ ನಡೆದಿದೆ. ಈ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಬೋರ್ಡ್ ಮೇಲೆ “KANNAGIDA M***” ಎಂದು ಬರೆಯಲಾಗಿದ್ದು, ಇದು ಅತಿರೇಕದ ವರ್ತನೆಯಂತೆ ಕಂಡಿದೆ. ಡಿಸ್ಪ್ಲೇ ಬೋರ್ಡ್ ನಲ್ಲಿ ಕನ್ನಡಿಗರ ಬಗ್ಗೆ ಅವಾಚ್ಯ ಪದಗಳಿಂದ ಅವಹೇಳನ ಮಾಡಲಾಗಿದೆ. ನಿನ್ನೆ ರಾತ್ರಿ ಈ ಬರಹ ಕಂಡುಬಂದಿದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಈ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೋಟೆಲ್ ನಲ್ಲಿ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೋರ್ಡ್ನಲ್ಲಿ ಬೇಕಂತಲೇ ಈ ರೀತಿ ಬರೆದು ಹಾಕಿದ್ದಾರೆ ಎನ್ನಲಾಗ್ತಿದೆ. ಈ ಕುರಿತು ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ.