ಧರ್ಮಸ್ಥಳ ಪ್ರಕರಣ: ಧರ್ಮಸ್ಥಳ, ಧರ್ಮಾಧಿಕಾರಿ ವಿರುದ್ಧ ಯಾರೂ ಇಲ್ಲ – ರಾಮಲಿಂಗಾರೆಡ್ಡಿ

0
Spread the love

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಬಗ್ಗೆಯಾಗಲಿ ಅಥವಾ ಧರ್ಮಾಧಿಕಾರಿಯವರ ವಿರುದ್ಧ ಆಗಲಿ ಯಾರೂ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ 14–15 ಕಡೆ ಅಗೆದರೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ.

Advertisement

ಧರ್ಮಸ್ಥಳ ಬಗ್ಗೆಯಾಗಲಿ, ಧರ್ಮಾಧಿಕಾರಿಯವರ ವಿರುದ್ಧವಾಗಲಿ ಯಾರೂ ಇಲ್ಲ. ಒಂದು ಸ್ಪಷ್ಟತೆ ತರಲು ಎಸ್ಐಟಿ ರಚಿಸಲಾಗಿದೆ” ಎಂದು ಹೇಳಿದರು. ಇನ್ನೂ ಅವರು, ಇಂದು ಗೃಹಸಚಿವ ಪರಮೇಶ್ವರ್ ಅವರು ಸದನದಲ್ಲಿ ಈ ವಿಷಯದ ಕುರಿತು ವಿವರವಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here