ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎಷ್ಟು ಸಿಂಪಲ್ ಅನ್ನೋದು ಈಗಾಗಲೇ ಗೊತ್ತಿದೆ. ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ರು ಆಗಾಗ ಅಭಿಮಾನಿಗಳ ಮನೆಗೆ ಭೇಟಿ ನೀಡುವುದು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದನ್ನು ಧ್ರುವ ಸರ್ಜಾ ಮಾಡ್ತಾನೆ ಇರ್ತಾರೆ. ಇದೀಗ ಧ್ರುವ ಸರ್ಜಾ ಅವರ ಸಿಂಪ್ಲಿಸಿಟಿಯ ಮತ್ತೋಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಧ್ರುವ ಸರ್ಜಾ ಇತ್ತೀಚೆಗೆ ಪತ್ನಿಯೊಂದಿಗೆ ನಟಿ ರಕ್ಷಿತಾ ಸಹೋದರ ರಾಣಾ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಹಿಳೆಯೊಬ್ಬರ ಚಪ್ಪಲಿಯನ್ನು ಅವರು ಎತ್ತಿಕೊಟ್ಟಿದ್ದಾರೆ. ಸ್ಟಾರ್ ನಟನಾಗಿದ್ರು ಮಹಿಳೆಯ ಚಪ್ಪಲಿ ಎತ್ತಿಕೊಟ್ಟಿದ್ದು ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್‌ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಕೆಡಿ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಚಿತ್ರದಿಂದ ಹಿಡಿದು ಮಾರ್ಟಿನ್ ಚಿತ್ರದವರೆಗೂ ಎಲ್ಲವೂ ಎರಡು ವರ್ಷ ಮತ್ತು ಮೂರು ವರ್ಷಗಳಷ್ಟು ಟೈಮ್ ತೆಗೆದುಕೊಂಡಿದ್ದಾರೆ.
ನಟ ಧ್ರುವ ಸರ್ಜಾ ಅವರ ವಿಡಿಯೋ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಇಂಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಕನ್ನಡಿಗರು ಕೂಡ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದೇ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮತ್ತು ನಟ ಧ್ರುವ ಸರ್ಜಾ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಶುರುವಾಗಿದೆ.
ಕೈಯಿಂದ ಚಪ್ಪಲಿ ಎತ್ತಿಟ್ಟ ನಟ ಧ್ರುವ ಸರ್ಜಾ ಅವರ ವಿಡಿಯೋನ ಶೇರ್ ಮಾಡುತ್ತಿರುವ ಧ್ರುವ ಅಭಿಮಾನಿಗಳು, ನಿಮ್ಮ ಬಾಸ್ ಈ ರೀತಿ ಮಾಡುತ್ತಿದ್ದರಾ? ಅಂತಾ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಧ್ರುವ ಫ್ಯಾನ್ಸ್ ಪ್ರಶ್ನೆ ಮಾಡುತ್ತಿದ್ದಾರೆ.