ಸದ್ಯ ಸ್ಯಾಂಡಲ್ವುಡ್ನಲ್ಲಿ ರಮ್ಯಾ vs ದರ್ಶನ್ ಅಭಿಮಾನಿಗಳ ಜಾಟಾಪಟಿ ಜೋರಾಗಿಯೇ ಕೇಳಿ ಬರ್ತಿದೆ. ದರ್ಶನ್ ಫ್ಯಾನ್ಸ್ ನಡೆಗೆ ರಮ್ಯಾ ಆಕ್ರೋಶ ಹೊರಹಾಕಿದ್ದು ಹಲವರು ರಮ್ಯಾ ಅವರಿಗೆ ಸಪೋರ್ಟ್ ಮಾಡ್ತಿದ್ದಾರೆ. ಇದೀಗ ನಟಿ ರಕ್ಷಿತಾ ಕೂಡ ರಮ್ಯಾ ಪರ ಬ್ಯಾಟ್ ಬೀಸಿರುವುದು ಅವರ ಪೋಸ್ಟ್ ನಿಂದ ಗೊತ್ತಾಗುತ್ತಿದೆ. ಕನಿಷ್ಠ ಸಭ್ಯತೆ ಇರಲಿ ಎಂದು ರಕ್ಷಿತಾ ಪ್ರೇಮ್ ಪೋಸ್ಟ್ ಮಾಡಿದ್ದು ಇದು ದರ್ಶನ್ ಅಭಿಮಾನಿಗಳಿಗೆ ಹಾಕಿರುವ ಪೋಸ್ಟ್ ಎನ್ನುವಂತಿದೆ.
ನಟಿ ರಕ್ಷಿತಾ ಪ್ರೇಮ್ ಅವರು ಇನ್ಸ್ಟಾಗ್ರಾಮ್ನಲ್ಲಿ ಕೆಲ ಇಂಗ್ಲಿಷ್ ಕೋಟ್ಗಳನ್ನು ಸ್ಟೇಟಸ್ಗೆ ಹಾಕಿದ್ದಾರೆ. ‘ನಿಮಗೆ ವ್ಯಕ್ತಿಗಳ ಮಾನಸಿಕ ಆರೋಗ್ಯ ನೋಡಲು ಸಾಧ್ಯವಿಲ್ಲ. ಯಾವಾಗಲೂ ದಯೆ ಇರಲಿ’ ಎಂಬ ಪೋಸ್ಟ್ ಹಂಚಿಕೊಂಡಿದ್ದಾರೆ. ‘ನಾನು ನಿಜವಾಗಿಯೂ ಏನು ವೈರಲ್ ಆಗಬೇಕೆಂದು ಬಯಸುತ್ತೇನೆ ಎಂದು ನಿಮಗೆ ತಿಳಿದಿದೆಯೇ? ಮೂಲಭೂತ ಮಾನವೀಯ ಸಭ್ಯತೆ’ ಎಂದು ಪೋಸ್ಟ್ ಮಾಡಿದ್ದಾರೆ.
ಅಂದು ಹಾಗೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಗೆ ಸುಪ್ರೀಂ ಕೋರ್ಟ್ ನೀಡಿರುವ ಜಾಮೀನನ್ನು ಹೈಕೋರ್ಟ್ ಪ್ರಶ್ನಿಸಿದೆ. ಸುಪ್ರೀಂಕೋರ್ಟ್ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆವಾಗ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ರಮ್ಯಾ ಹೇಳಿದ್ದರು. ಇದರಿಂದ ದರ್ಶನ್ ಫ್ಯಾನ್ಸ್ ಆಕ್ರೋಶಗೊಂಡಿದ್ದು ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾರೆ. ಇದನ್ನು ರಮ್ಯಾ ಹಂಚಿಕೊಂಡಿದ್ದು ಈ ಬಗ್ಗೆ ಸೈಬರ್ ಠಾಣೆಗೆ ದೂರು ನೀಡಲು ನಟಿ ಮುಂದಾಗಿದ್ದಾರೆ.