HomeGadag Newsಬರವಣಿಗೆ ವ್ಯಕ್ತಿತ್ವದ ಪ್ರತಿಬಿಂಬ : ಸುಮಾ ಪಾಟೀಲ

ಬರವಣಿಗೆ ವ್ಯಕ್ತಿತ್ವದ ಪ್ರತಿಬಿಂಬ : ಸುಮಾ ಪಾಟೀಲ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಓದುವದು ಒಂದು ಸುಂದರ ಕಲೆ. ಸ್ವರಭಾರಯುಕ್ತ ಓದು ಎಲ್ಲರಿಗೂ ಪ್ರಿಯವಾದದ್ದು. ಮಕ್ಕಳು ಸ್ಪಷ್ಟ ಓದು, ಶುದ್ಧ ಬರಹವನ್ನು ಸರಿಯಾದ ಕ್ರಮದಲ್ಲಿ ರೂಢಿಸಿಕೊಂಡು ಪ್ರತಿಭಾನ್ವಿತರಾಗಬೇಕೆಂದು ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್‌ನ ಲಿಟರೇಚರ್ ಕಮಿಟಿ ಚೇರಮನ್ ಸುಮಾ ಪಾಟೀಲ ಹೇಳಿದರು.

ಅವರು ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್‌ನಿಂದ ದತ್ತು ಪಡೆದ ಬೆಟಗೇರಿಯ ಶರಣಬಸವೇಶ್ವರ ನಗರದ ಸರಕಾರ ಶಾಲೆ ನಂ.೬ರಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಸ್ಪಷ್ಟ ಓದು-ಶುದ್ಧ ಬರಹ’ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಕ್ಲಬ್ ಅಧ್ಯಕ್ಷೆ ನಾಗರತ್ನ ಮಾರನಬಸರಿ ಮಾತನಾಡಿ, ವಿದ್ಯಾರ್ಥಿ ಜೀವನ ಬಂಗಾರದ ಜೀವನ. ಚಿಕ್ಕ ವಯಸ್ಸಿನಲ್ಲಿ ಬೆಳಸಿಕೊಳ್ಳುವ ಹವ್ಯಾಸಗಳು ನಿಮ್ಮ ಜೀವನದುದ್ದಕ್ಕೂ ನಿಮ್ಮ ಜೊತೆಯಲ್ಲಿರುತ್ತವೆ ಎಂದರು.

ಕ್ಲಬ್‌ನ ಐಎಸ್‌ಓ ಪುಷ್ಪಾ ಭಂಡಾರಿ, ಮುಖ್ಯೋಪಾಧ್ಯಾಯೆ ವ್ಹಿ.ಕೆ. ಮುತಾಲಿಕ್‌ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಲಕ್ಷ್ಮಿ ತೊಂಡಿಹಾಳ ಪ್ರಾರ್ಥಿಸಿದರು. ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಸ್ವಾಗತಿಸಿದರು. ವೈ.ಎಚ್. ಹಡಪದ ನಿರೂಪಿಸಿದರು. ಎಸ್.ಬಿ. ಇಟಗಿ ವಂದಿಸಿದರು. ಎಸ್.ಎಂ. ಹಳೇಮನಿ, ಎಸ್.ಎಸ್. ವನಹಳ್ಳಿ, ಎಸ್.ಎಂ. ಕರಡಕಲ್ಲ, ಎ.ಎಚ್. ಚಿಗರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img