30 ದಿನ ಉಪ್ಪು ತಿನ್ನದಿದ್ದರೆ ಏನಾಗಬಹುದು ಗೊತ್ತಾ? ನೀವು ಇದನ್ನು ತಿಳಿಯಿರಿ!

0
Spread the love

ಅನೇಕ ಮಂದಿ ಉಪ್ಪು ಇಲ್ಲದೇ ಬದುಕಲಾರರು. ‘ಉಪ್ಪು’ ಇಲ್ಲದ ಅಡಿಗೆ ರುಚಿ ಎನಿಸುವುದೇ ಇಲ್ಲ. ಹಾಗಂತ ಉಪ್ಪು ಹೆಚ್ಚಾದರೂ ಅಡಿಗೆ ರುಚಿಯಾಗಿರುವುದಿಲ್ಲ. ಕೇವಲ ಆಹಾರದ ವಿಷಯದಲ್ಲಿ ಮಾತ್ರವಲ್ಲ ಆರೋಗ್ಯದ ವಿಚಾರದಲ್ಲೂ ‘ಉಪ್ಪು’ ಯಾವುದೇ ವರದಾನಕ್ಕಿಂತ ಕಡಿಮೆ ಇಲ್ಲ. ಇದೇನಪ್ಪ, ಉಪ್ಪು ಕಡಿಮೆ ಮಾಡಿ, ಉಪ್ಪು ಬಳಸಿದರೆ ರಕ್ತದೊತ್ತಡ ಹೆಚ್ಚಾಗುತ್ತೆ ಅಂತ ಡಾಕ್ಟರ್ ಹೇಳಿದ್ರೆ, ಇವರು ಉಪ್ಪು ತಿನ್ನಲು ಸಲಹೆ ನೀಡುತ್ತಾರಲ್ಲ ಅಂದುಕೊಳ್ಳಬೇಡಿ. ಉಪ್ಪನ್ನು ಜಾಸ್ತಿ ತಿಂದರೆ ಬಿಪಿ ಬರೋದು ಗ್ಯಾರಂಟಿ. ಆದರೆ, ಇದನ್ನು ಸೀಮಿತ ಪ್ರಮಾಣದಲ್ಲಿ ಬಳಸುವುದರಿಂದ ಮಾತ್ರ ಆರೋಗ್ಯಕ್ಕೆ ಪ್ರಯೋಜನವನ್ನು ಪಡೆಯಬಹುದಾಗಿದೆ.

Advertisement

ತರಕಾರಿ ಅಥವಾ ಇನ್ಯಾವುದೇ ಆಹಾರದಲ್ಲಿ ಉಪ್ಪು ಕಡಿಮೆಯಿದ್ದರೆ ಅದನ್ನು ಸೇವಿಸುವುದು ಒಳ್ಳೆಯದಲ್ಲ. ಹಾಗಂತ ಅತಿಯಾಗಿ ಉಪ್ಪು ತಿಂದರೆ ದೇಹಕ್ಕೆ ಗಂಭೀರ ಹಾನಿಯಾಗುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆಯು ಹೆಚ್ಚಾಗುತ್ತದೆ, ಇದರಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವೂ ಹೆಚ್ಚಾಗುತ್ತದೆ. ಜೊತೆಗೆ ಹೆಚ್ಚು ಉಪ್ಪು ತಿನ್ನುವುದು ಮೂತ್ರಪಿಂಡದ ಹಾನಿ ಮತ್ತು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಅತಿಯಾಗಿ ಉಪ್ಪು ತಿನ್ನುವುದರಿಂದ ಹೊಟ್ಟೆಯ ಕ್ಯಾನ್ಸರ್ ಕೂಡ ಉಂಟಾಗುತ್ತದೆ. ಇದರಿಂದ ಸಾವು ಕೂಡ ಸಂಭವಿಸಬಹುದು.

ಹಾಗಂತ ಜೀವಕ್ಕೆ ಹೆದರಿ ಉಪ್ಪು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಅಥವಾ ಕೇವಲ ಒಂದು ತಿಂಗಳು ಉಪ್ಪು ಸೇವಿಸದಿದ್ದರೆ ಏನಾಗಬಹುದು? ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಗಳಾಗಬಹುದು ಎಂಬ ಬಗ್ಗೆ ವೈದ್ಯರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಮೊದಲನೇಯದಾಗಿ ದೇಹದಲ್ಲಿ ನೀರು ಇರುವುದಿಲ್ಲ. ಉಪ್ಪು ಅಥವಾ ಸೋಡಿಯಂ ನೀರನ್ನು ಬಂಧಿಸುತ್ತದೆ. ನಮ್ಮ ದೇಹದ ಬಹುಪಾಲು ನೀರಿನಿಂದ ಮಾಡಲ್ಪಟ್ಟಿದೆಯಾದ್ದರಿಂದ, ದೇಹದಲ್ಲಿನ ನಿರ್ಜಲೀಕರಣವು ದೇಹದ ಮೇಲೆ ಪರಿಣಾಮ ಬೀರುತ್ತದೆ ಒಂದು ತಿಂಗಳು ಉಪ್ಪು ತಿನ್ನದಿದ್ದರೆ ರಕ್ತದೊತ್ತಡ ಕಡಿಮೆಯಾಗಲು ಪ್ರಾರಂಭವಾಗುತ್ತದೆ.

ಸರಿಯಾದ ಪ್ರಮಾಣದಲ್ಲಿ ಉಪ್ಪನ್ನು ಸೇವಿಸದಿದ್ದರೆ ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮ ಸ್ನಾಯುಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಯಾವುದೇ ರೀತಿಯ ನರ ಸಂವಹನವನ್ನು ಕಡಿತಗೊಳಿಸಲಾಗುತ್ತದೆ. ಇದರಿಂದ ದೇಹದಲ್ಲಿ ವಾಕರಿಕೆ, ತಲೆಸುತ್ತು, ನಿರ್ಜಲೀಕರಣದಂತಹ ಸಮಸ್ಯೆಗಳು ಶುರುವಾಗುತ್ತವೆ. ಹಾಗಾಗಿ ಉಪ್ಪನ್ನು ಬಿಡುವ ಬಗ್ಗೆ ಎಂದಿಗೂ ಯೋಚಿಸಬೇಡಿ.

ಒಂದು ತಿಂಗಳವರೆಗೆ ನೀವು ಉಪ್ಪು ಸೇವಿಸದಿದ್ದರೆ, ನೀವು ಕೋಮಾಗೆ ಹೋಗಬಹುದು ಮತ್ತು ಹಠಾತ್ ಸಾವನ್ನಪ್ಪಬಹುದು. ಆದ್ದರಿಂದ ಪ್ರತಿದಿನ ಸೀಮಿತ ಪ್ರಮಾಣದ ಉಪ್ಪನ್ನು ಸೇವಿಸುವುದು ಮುಖ್ಯ. WHO ಪ್ರಕಾರ, ನಾವು ದಿನಕ್ಕೆ 5 ಗ್ರಾಂ ಉಪ್ಪನ್ನು ಸೇವಿಸಬೇಕು. ಇದಕ್ಕಿಂತ ಹೆಚ್ಚಿನ ಪ್ರಮಾಣದ ಉಪ್ಪನ್ನು ತಿಂದರೆ ದೇಹದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಅಲ್ಲದೇ ಇದಕ್ಕಿದ್ದಂತೆ ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಅನೇಕ ಸಮಸ್ಯೆಗಳು ಉದ್ಭವಿಸುತ್ತದೆ.

ಯಕೃತ್ತು ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ, ವೈದ್ಯರು ಕಡಿಮೆ ಉಪ್ಪು ಸೇವಿಸುವಂತೆ ಸಲಹೆ ನೀಡುತ್ತಾರೆ. ಆದರೆ, ನೀವು ಪ್ರತಿದಿನ ಎಷ್ಟು ಉಪ್ಪು ಸೇವಿಸಬೇಕು ಎಂದು ತಿಳಿದುಕೊಳ್ಳಲು ವೈದ್ಯರು ನಿರ್ಧರಿಸುತ್ತಾರೆ. ಒಬ್ಬ ಸಾಮಾನ್ಯ ಆರೋಗ್ಯವಂತ ವ್ಯಕ್ತಿ ದಿನಕ್ಕೆ ಒಂದು ಟೀಚಮಚ ಉಪ್ಪನ್ನು ಸೇವಿಸಬೇಕು. ಆದರೆ, ಹೆಚ್ಚುವರಿ ಉಪ್ಪು ತಿಂದರೆ ದೇಹಕ್ಕೆ ಹಾನಿಯಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here