ಗದಗ: ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ್ ವಿರುದ್ಧ ಕನ್ನಡಪರ ಹೋರಾಟಗಾರ ಶರಣು ಗೋಡಿ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪತ್ರಿಕಾ ಭವನದಲ್ಲಿ ಮಾತನಾಡಿದ ಶರಣು ಗೋಡಿ ಅವರು, ನನ್ನ ಮಕ್ಕಳ ಶಿಕ್ಷಣದ ಬಗ್ಗೆ ಮಾತನಾಡಿದ್ದೀರಿ. ನನ್ನ ಮಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದಿದ್ದು, ಬೇಕಾದ್ರೆ ಅಂಕಪಟ್ಟಿ ನಿಮ್ಮ ಮನೆಗೆ ಪೋಸ್ಟ್ ಮಾಡ್ತೀನಿ.
ನನಗೆ ಕನ್ನಡದ ಬಗ್ಗೆ ಪಾಠ ಮಾಡಲು ಬರಬೇಡ ಎಂದು ಏಕವಚನದಲ್ಲಿ ಗುಡುಗಿದರು. ಅಲ್ಲದೇ ಗಣಪತಿ ಸಭಾ ಮಂಟಪದಲ್ಲಿ ಇಸ್ಪೀಟು ಆಡಿದ ವಿಡಿಯೋ ಇದ್ರೆ ಬಿಡುಗಡೆ ಮಾಡಿ. ನಿಮಗೆ ನೈತಿಕತೆ ಇಲ್ಲ, ನಿಮ್ಮ ಪಕ್ಕದಲ್ಲಿ ಅತ್ಯಾಚಾರ ಯತ್ನದ ಆರೋಪಿ, ಮರುಳು ದಂಧೆಕೋರರು ಇದ್ದಾರೆ.
ಜೈಲಿಗೆ ಹೋಗಿಬಂದವರನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಂಡು ಪತ್ರಿಕಾಗೋಷ್ಠಿ ನಡೆಸುವ ನಿಮಗೆ ನಾಚಿಕೆ ಇಲ್ಲ ಎಂದು ಶರಣು ಗೋಡಿ ರಾಜು ಖಾನಪ್ಪನವರ್ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು.