ಶ್ರೀಗಳ ಜೀವನ ಕನ್ನಡ, ಬಸವಣ್ಣನಿಗೆ ಮೀಸಲಾಗಿತ್ತು

0
kasapa
Spread the love

ವಿಜಯಸಾಕ್ಷಿ ಸುದ್ದಿ, ಗದಗ : ತೋಂಟದ ಸಿದ್ಧಲಿಂಗ ಶ್ರೀಗಳು ಗೋಕಾಕ ಚಳವಳಿಗೆ ಸಿಂದಗಿಯಲ್ಲಿ ಮುನ್ನುಡಿ ಬರೆಯುವ ಮೂಲಕ ಕನ್ನಡದ ಅಭಿಯಾನವನ್ನು ಪ್ರಾರಂಭಿಸಿದರು. ಮುಂದೆ ಗದುಗಿನ ಮಠದಲ್ಲಿ ಪುಸ್ತಕ ಪ್ರಕಟನೆಯನ್ನು ಪ್ರಾರಂಭಿಸಿ ಒಂದು ಶತಮಾನದ ಇತಿಹಾಸವನ್ನು ಕನ್ನಡ ನಾಡಿಗೆ ನೀಡಿದ್ದಾರೆ. ಶಿವಾನುಭವ ವೇದಿಕೆ ಮೂಲಕ ಕನ್ನಡವನ್ನು ಕಟ್ಟುವ ಕಾರ್ಯವನ್ನು ಪೂಜೆಯ ರೂಪದಲ್ಲಿ ನೇರವೇರಿಸಿದ್ದಾರೆ. ಅವರ ಜೀವನ ಕನ್ನಡ ಮತ್ತು ಬಸವಣ್ಣನಿಗೆ ಮೀಸಲಾಗಿತ್ತು ಎಂದು ಅಣ್ಣಿಗೇರಿಯ ಸಂಸ್ಕೃತಿ ಚಿಂತಕ ಎಸ್.ಎಸ್. ಹರ್ಲಾಪುರ ನುಡಿದರು.

Advertisement

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜರುಗಿದ ಡಾ. ತೋಂಟದ ಸಿದ್ಧಲಿಂಗಶ್ರೀಗಳ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ `ಕನ್ನಡಕ್ಕೆ ಡಾ. ತೋಂಟದ ಸಿದ್ಧಲಿಂಗಶ್ರಿಗಳ ಕೊಡುಗೆ’ ಕುರಿತಾಗಿ ಮಾತನಾಡಿದರು.

ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ 600ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಮಠವನ್ನು ಜ್ಞಾನ ದಾಸೋಹದ ಕೇಂದ್ರವನ್ನಾಗಿದರು. ಲೇಖಕರನ್ನು, ಸಂಶೋಧಕರನ್ನು ಪ್ರೋತ್ಸಾಹಿಸಿದರು. ಈ ಕಾರ್ಯದಿಂದಲೇ ಅವರನ್ನು ಪುಸ್ತಕ ಸ್ವಾಮಿಜೀ, ಕನ್ನಡ ಜಗದ್ಗುರು ಎಂದು ವ್ಯಾಖ್ಯಾನಿಸಿದರೆಂದು ತಿಳಿಸಿದರು.

ಕಿತ್ತೂರ ಕರ್ನಾಟಕ ದಿನಪತ್ರಿಕೆ ಸಂಪಾದಕ ಮಂಜುನಾಥ ಅಬ್ಬಿಗೇರಿ ಮಾತನಾಡಿ, ಪತ್ರಿಕೆ ನಡೆಸುವದು ಸುಲಭದ ಕೆಲಸವಲ್ಲ. ಪತ್ರಿಕೆಯನ್ನು ಪ್ರಾರಂಭಿಸುವದಕ್ಕೆ ಮುಖ್ಯ ಪ್ರೇರಣೆ ತೋಂಟದ ಸಿದ್ಧಲಿಂಗಶ್ರೀಗಳಾಗಿದ್ದರು. ಸರಕಾರ ಈ ಭಾಗವನ್ನು ಕಿತ್ತೂರ ಕರ್ನಾಟಕ ಎಂದು ಘೋಷಿಸುವ 13 ವರ್ಷಗಳ ಹಿಂದೆಯೇ ಪತ್ರಿಕೆ ಪ್ರಾರಂಭಿಸಲಾಯಿತು. ಸರಕಾರ ಮತ್ತು ಜನರ ಮಧ್ಯೆ ಕೊಂಡಿಯಾಗಿ ಪತ್ರಿಕೆ ಕಾರ್ಯ ಮಾಡುತ್ತಿದೆ.

ಜನಸಾಮಾನ್ಯರ ಸಮಸ್ಯೆಗಳನ್ನು ಪತ್ರಿಕೆಗಳ ಮೂಲಕ ಜನಪತ್ರಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವೇದಿಕೆ ಮೇಲೆ ಎಸ್.ಎಸ್. ಕಳಸಾಪುರಶೆಟ್ರು ಉಪಸ್ಥಿತರಿದ್ದರು. ಡಾ.ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಶಿವಾನಂದ ಗಿಡ್ನಂದಿ ವಂದಿಸಿದರು.

ಕಾರ್ಯಕ್ರಮದಲ್ಲಿ ಪ್ರೊ. ಚಂದ್ರಶೇಖರ ವಸ್ತçದ, ಪ್ರೊ ಕೆ.ಎಚ್. ಬೇಲೂರ ಡಾ. ಅನಂತ ಶಿವಪುರ, ಡಾ.ವಾಣಿ ಅನಂತ ಶಿವಪುರ, ಪ್ರೊ. ವಿ.ಎಸ್. ದಲಾಲಿ, ಸಿ.ಕೆ.ಎಚ್. ಶಾಸ್ತಿç(ಕಡಣಿ), ಎಸ್.ಎಫ್. ಬೆನಕಣ್ಣವರ ಅ.ದ. ಕಟ್ಟೀಮನಿ, ಟಿಕನದಾರ, ಈರನಗೌಡ ಮಣಕವಾಡ, ಎಸ್.ಎಫ್. ಭಜಂತ್ರಿ, ಕೆ.ಎಸ್. ಗುಗ್ಗರಿ, ಸತೀಶ ಹುನಕುಂಟಿ, ಯಲ್ಲಮ್ಮ ತೋಟದ, ಅಜಿತ ಘೋರ್ಪಡೆ, ಆರ್.ಡಿ. ಕಪ್ಪಲಿ, ಪ್ರ.ತೊ. ನಾರಾಯಣಪುರ, ಬಿ.ಎಸ್. ಹಿಂಡಿ, ರತ್ನಕ್ಕ ಪಾಟೀಲ, ನೀಲಮ್ಮ ಅಂಗಡಿ, ಮಂಜುಳಾ ವೆಂಕಟೇಶಯ್ಯ, ರಕ್ಷಿತಾ ಎಸ್.ಗಿಡ್ನಂದಿ, ವಿದ್ಯಾ ಪಾಟೀಲ, ಡಾ. ರಶ್ಮಿ ಅಂಗಡಿ, ಡಾ.ಈರಣ್ಣ ಕೊರಚಗಾಂವ, ಶಿವಕುಮಾರ ಬೇವಿನಮರದ, ಪ್ರಸನ್ನಕುಮಾರ ಇನಾಮದಾರ, ಜೆ.ಆರ್. ಕುಲಕರ್ಣಿ, ಅಕ್ಕಮ್ಮ ಪಾರ್ವತಿಮಠ, ರತ್ನಾ ಪುರಂತರ, ಸುಧಾ ಬಳ್ಳಿ, ಶಶಿಕಾಂತ ಕೊರ್ಲಹಳ್ಳಿ, ಎಂ.ಎಫ್. ಡೋಣ, ಶ್ರೀನಿವಾಸ ಕುಲಕರ್ಣಿ, ಜಿ.ಎ. ಪಾಟೀಲ, ಎಂ.ಎಚ್. ಸವದತ್ತಿ, ಸಿ.ಎಂ. ಮಾರನಬಸರಿ, ಶಂಕರಗೌಡ ಪಾಟೀಲ, ಅಶೋಕ ಸತರೆಡ್ಡಿ, ಷಡಕ್ಷರಿ ಮೆಣಸಿನಕಾಯಿ, ಸತೀಶಕುಮಾರ ಚನ್ನಪ್ಪಗೌಡರ, ಎಚ್.ಟಿ. ಸಂಜೀವಸ್ವಾಮಿ, ಎಂ.ಎಸ್. ಅಸುಂಡಿ, ಕೊಟ್ರೇಶ ಜವಳಿ, ಕಳಕಪ್ಪ ಜಲ್ಲಿಗೇರಿ, ಗೀತಾ ಲಿಂ.ಪಾಟೀಲ, ರಾಜು ದಿಂಡೂರ, ರಾಜಶೇಖರ ಕರಡಿ, ಬಸವರಾಜ ವಾರಿ, ಲಿಂಗರಾಜ ಪಾಟೀಲ, ನಿರ್ಮಲಾ ಪಾಟೀಲ, ಬಿ.ಬಿ. ಪಾಟೀಲ, ಅಮರೇಶ ರಾಂಪುರ, ಡಿ.ಎಸ್. ಬಾಪುರೆ ಉಪಸ್ಥಿತರಿದ್ದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪೂಜ್ಯ ಶ್ರೀಗಳು ಸೂಕ್ಷö್ಮಮತಿಗಳಾಗಿದ್ದು, ಪ್ರತಿ ವ್ಯಕ್ತಿಯಲ್ಲಿರುವ ಉತ್ತಮ ಗುಣಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಬಂದ ಭಕ್ತರಿಗೆ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿ ಓದುವ ಸಂಸೃತಿಯನ್ನು ಬೆಳೆಸುವ ಮಹತ್ವದ ಕಾರ್ಯವನ್ನು ಮಾಡಿದರು. ಭಕ್ತರು ನೀಡಿದ ಹಣವನ್ನು ಪುಸ್ತಕ ಪ್ರಕಟನೆಗೆ ಬಳಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಕಾರ್ಯವನ್ನು ಮಾಡಿದರೆಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here