ಶ್ರೀದೇವಿ ಪುರಾಣ, ಅನ್ನಪೂರ್ಣೇಶ್ವರಿ ದೇವಿ ಜಾತ್ರೆ

0
Dussehra celebration at Advindra Swami Math from A.3
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದುಗಿನ ಅಡವೀಂದ್ರ ಸ್ವಾಮಿ ಮಠದಲ್ಲಿ ಅಕ್ಟೋಬರ್ 3ರಿಂದ 12ರವರೆಗೆ ದಸರಾ ಮಹೋತ್ಸವದ 44ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಹಾಗೂ 10ನೇ ವರ್ಷದ ಅನ್ನಪೂರ್ಣೇಶ್ವರಿ ದೇವಿಯ ಮಹಾರಥೋತ್ಸವದ ಅಂಗವಾಗಿ ವಿವಿದ ಧಾರ್ಮಿಕ ಕಾರ್ಯಕ್ರಮಗಳು ಶೃದ್ಧಾಭಕ್ತಿಯೊಂದಿಗೆ ಜರುಗಲಿವೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಎಸ್.ಪಲ್ಲೇದ ಹೇಳಿದರು.
ಅವರು ರವಿವಾರ ಶ್ರೀಮಠದಲ್ಲಿ ಜಾತ್ರಾ ಮಹೋತ್ಸವ ಸಮಿತಿ ಹಾಗೂ ಭಕ್ತಾಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಡಾ.ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಪುರಾಣ ಪ್ರವಚನ, ಚನ್ನಬಸಯ್ಯಶಾಸ್ತ್ರಿ ಹೇಮಗಿರಿಮಠ ಅವರಿಂದ ಪುರಾಣ ಪಠಣ, ಸುಕ್ರುಸಾಬ ಮುಲ್ಲಾ, ಜಗನ್ನಾಥ ಕಲಬುರ್ಗಿ, ಗುರುನಾಥ ಸುತಾರ, ಎಸ್.ಜಿ. ಭಜಂತ್ರಿ ಸಂಗೀತ ಕಲಾ ಬಳಗದಿಂದ ಸಂಗೀತ ಜರುಗುವದು.
ಅ. 3ರಂದು ಮುಂಜಾನೆ 9 ಗಂಟೆಗೆ ಧರ್ಮ ಧ್ವಜಾರೋಹಣವು ಅಡ್ನೂರ-ಗದುಗಿನ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ, ಶ್ರೀಮಠದ ಧರ್ಮದರ್ಶಿ ಪೂಜ್ಯ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಅವರ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಪಲ್ಲೇದ ಧ್ವಜಾರೋಹಣ ನೆರವೇರಿಸುವರು.
ಜಾತ್ರಾ ಮಹೋತ್ಸವದ ಮಹಿಳಾ ಸಮಿತಿಯ ಅಧ್ಯಕ್ಷೆ ಲೀಲಾವತಿ ಬಿಳೆಯಲಿ, ಪೂಜಾ ಸಮಿತಿಯ ಅಧ್ಯಕ್ಷ ಶರಣಯ್ಯ ಶಾಸ್ತ್ರಿ ಶಿವಪ್ಪಯ್ಯನಮಠ, ಶಿವಾನುಭವ ಗೋಷ್ಠಿ ಸಮಿತಿ ಅಧ್ಯಕ್ಷ ಡಾ. ಎಸ್.ಕೆ. ನಾಲತ್ವಾಡಮಠ ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ವಾಣಿಜ್ಯ ತೆರಿಗೆ ಅಧಿಕಾರಿ ರಾಜಶೇಖರಯ್ಯ ಕಾಲವಾಡಮಠ, ಭಾರತಿ ಕಾಲವಾಡಮಠ, ಪ್ರಾಚಾರ್ಯ ಎಸ್.ಎ. ಅವಾರಿ ಆಗಮಿಸುವರು. ಸಂಜೆ 6.30 ಗಂಟೆಗೆ ಘಟಸ್ಥಾಪನೆ ಹಾಗೂ ಶ್ರೀದೇವಿ ಪುರಾಣ ಪ್ರಾರಂಭೋತ್ಸವದ ಸಾನ್ನಿಧ್ಯವನ್ನು ಶಿರೋಳ ತೋಂಟದಾರ್ಯ ಮಠದ ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ವಹಿಸುವರು. ಶೋಭಾ ಎನ್.ಬಿರಾದಾರ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಡಾ. ಎನ್.ಎಸ್. ಬಿರಾದಾರ, ಧಾರವಾಡದ ಅರವಿಂದ ವಸ್ತçದ, ಲಲಿತಾ ವಸ್ತçದ ಆಗಮಿಸುವರು.
ಪ್ರತಿ ದಿನ ಸಂಜೆ 6.30 ಗಂಟೆಗೆ ಪುರಾಣ ಪ್ರವಚನ ಕಾರ್ಯಕ್ರಮ ಜರುಗಲಿದ್ದು, ಗಣ್ಯ ಮಹನೀಯರು ಆಗಮಿಸುವರು. ಜಾತ್ರಾ ಮಹೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ, ಅ. 13ರಂದು ಅನ್ನಪೂರ್ಣೇಶ್ವರಿ ಜಾತ್ರೆಯ ದಿನ ಸಾಂಸ್ಕೃತಿಕ ಕಲಾ ವೈಭವ, ಕೋಲಾಟ ಮೇಳ ಇತರೆ ಕಾರ್ಯಕ್ರಮಗಳು ಪ್ರತಿ ವರ್ಷದಂತೆ ಜರುಗಲಿದ್ದು, ಸಕಲ ಸದ್ಭಕ್ತರು ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೋಳ್ಳಬೇಕೆಂದು ವಿನಂತಿಸಿದರು.
ವೇದಿಕೆಯ ಮೇಲೆ ಮಹಿಳಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೀತಾ ಹೂಗಾರ, ಕೋಶಾಧ್ಯಕ್ಷೆ ಸುವರ್ಣಾ ಮದರಿಮಠ, ಶಾಂತಾಬಾಯಿ ಬಾಕಳೆ, ಸಹ ಕಾರ್ಯದರ್ಶಿ ಎಂ.ಎಂ. ಜೋಗಿನ ಉಪಸ್ಥಿತರಿದ್ದರು. ಜಾತ್ರಾ ಮಹೋತ್ಸವದ ಪ್ರಧಾನ ಕಾರ್ಯದರ್ಶಿ ಯು.ಆರ್. ಭೂಸನೂರಮಠ ಸ್ವಾಗತಿಸಿದರು. ಕೋಶಾಧ್ಯಕ್ಷ ಸಿದ್ಧಣ್ಣ ಜವಳಿ ವಂದಿಸಿದರು.
Advertisement
ಅನ್ನಪೂರ್ಣೆಶ್ವರಿ ದೇವಿಯ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರೇ ತೇರು ಎಳೆಯುವದು ಇಲ್ಲಿನ ವಿಶೇಷವಾಗಿದೆ. ಶ್ರೀದೇವಿಗೆ ಹಾಗೂ ಮುತ್ತೈದೆಯರಿಗೆ ಅರಿಶಿಣ-ಕುಂಕುಮ, ಬಳೆ ಸೇವೆ, ಉಡಿ ತುಂಬುವ ಕಾರ್ಯಕ್ರಮ, ಕುಮಾರಿ ಪೂಜೆ, ಕುಂಭೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
-ಲೀಲಾವತಿ ಬಿಳೇಯಲಿ
ಅಧ್ಯಕ್ಷರು, ಮಹಿಳಾ ಸಮಿತಿ.

Spread the love

LEAVE A REPLY

Please enter your comment!
Please enter your name here