ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಪ್ರವಾದಿ ಮುಹಮ್ಮದ ಪೈಗಂಬರ ಜಯಂತಿ ಅಂಗವಾಗಿ ಇಲ್ಲಿಯ ಅಂಜುಮನ್-ಎ-ಇಸ್ಲಾಮ್ ಕಮಿಟಿಯ ಆಶ್ರಯದಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಪಾಪನಾಶಿ ರಸ್ತೆಯಲ್ಲಿರುವ ಮಾಬುಸುಬಾನಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸಲೀಮ್ ಹಾಗೂ ಯಹ್ಯಾ ಹಾಪೀಜ್ ಅವರು ಬೈಕ್ ಮೆರವಣಿಗೆಗೆ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದ ಮುಸ್ಲಿಂ ಬಾಂಧವರು ಮುಹಮ್ಮದ ಪೈಗಂಬರರ ಕುರಿತು ಘೋಷಣೆಗಳನ್ನು ಕೂಗಿದರು. ಮೆರವಣಿಗೆಯು ಹಿರೇಮಸೂತಿಯಲ್ಲಿ ಮುಕ್ತಾಯವಾಯಿತು.
ನಂತರ ನಡೆದ ಕಾರ್ಯಕ್ರಮದಲ್ಲಿ ಮುಹಮ್ಮದ ಪೈಗಂಬರರ ಜೀವನ ಚರಿತ್ರೆಯ ಕುರಿತು ಸಲೀಮ್ ಹಾಪೀಜ್ ಪ್ರವಚನ ನೀಡಿದರು. ಗದಗ ಗ್ರಾಮೀಣ ಸಿ.ಪಿ.ಐ ಸಿದ್ರಾಮೇಶ ಗಡೇದ ಮಾತನಾಡಿದರು.
ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ನಜೀರಅಹ್ಮದ ಕಿರೀಟಗೇರಿ, ದಾದಾಸಾಬ ಕೊರ್ಲಹಳ್ಳಿ, ಖಾಜಿಸಾಬ ಮುಲ್ಲಾ, ಜಾವೇದ್ ಯರಗುಡಿ, ಮಹ್ಮದಸಾಬ ನದಾಫ್, ಕಾಶಿಂಸಾಬ ತಹಸೀಲ್ದಾರ, ಅಬ್ದುಲ್ ರಸೂಲಸಾಬ ದೌಲತ್ತರ, ಇಮ್ರಾನ್ ಕೊರ್ಲಹಳ್ಳಿ, ಧರಿಯಾಸಾಬ ನದಾಫ್, ಕಾಶಿಂಸಾಬ ನದಾಫ್, ಮುಸ್ತಾಕ್ ಹಾದಿಮನಿ ಇತರರು ಹಾಜರಿದ್ದರು. ಕಾರ್ಯಕ್ರಮದ ನಂತರ ಅನ್ನ ಸಂತರ್ಪಣೆ ನಡೆಯಿತು.



