ಗದಗ: ರಾಜ್ಯದಲ್ಲಿ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ, ಕೇಂದ್ರದ OBC ಮೀಸಲಾತಿಗಾಗಿ ಪಾದಯಾತ್ರೆ ಸೇರಿದಂತೆ ಅನೇಕ ಹೋರಾಟ ಮಾಡಿದ್ದೇವೆ ಎಂದು ಗದಗ ನಗರದಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಹೋರಾಟಕ್ಕೆ ಮಣಿದ ಬೊಮ್ಮಾಯಿ ನೇತೃತ್ವದ ಹಿಂದಿನ ಸರ್ಕಾರ 2D ಮೀಸಲಾತಿ ಘೋಷಣೆ ಮಾಡಿದ್ರು. ಮರುದಿನವೇ ನೀತಿಸಂಹಿತೆ ಜಾರಿಗೆ ಬಂತು ಆದ್ರೆ ಹಾಗಾಗಿ ಇದುವರೆಗೂ 2D ಅನುಷ್ಠಾನಕ್ಕೆ ಬಂದಿಲ್ಲ, ಈಗಿನ ಸರ್ಕಾರದ ಮುಖ್ಯಮಂತ್ರಿ ಸಿಧ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡ್ವಿ, ಒಂದು ತಿಂಗಳ ಒಳಗಾಗಿ ಸಿಎಂ ಕಾನೂನು ತಜ್ಞರೊಂದಿಗೆ ಮಾತಾಡಿ ಸಭೆ ಕರೀತೀನಿ ಅಂದ್ರು.
ಮೂರು ತಿಂಗಳಾದ್ರೂ ಸಭೆ ಕರೆದು ಪ್ರತಿಕ್ರಿಯೆ ಕೊಡಲಿಲ್ಲ ಹಾಗಾಗಿ ಸರ್ಕಾರದ ಗಮನ ಸೆಳೆಯಲು ಹೋರಾಟವನ್ನು ಬೆಳಗಾವಿಯಿಂದ ಪ್ರಾರಂಭ ಮಾಡಲಾಗಿದೆ ಎಂದರು.
ಇನ್ನೂ ಸಾಮೂಹಿಕ ಲಿಂಗಪೂಜೆಯೊಂದಿಗೆ ಎಲ್ಲಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೋರಾಟ ಮಾಡಲಾಗ್ತಿದೆ. ಇದು ೬ ನೇ ಹಂತದ ಎರಡನೇ ಭಾಗದ ಹೋರಾಟವಾಗಿದ್ದು, ಬೆಳಗಾವಿ, ಬಾಗಲಕೋಟೆ, ವಿಜಾಪುರ, ಕೊಪ್ಪಳ, ಧಾರವಾಡ ಯಶಸ್ವಿ ಹೋರಾಟ ಮಾಡಲಾಗಿದೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.