ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.4ರಲ್ಲಿ ಬುಧವಾರ ವಿಶ್ವ ಮಾನವ ಹಕ್ಕುಗಳ ದಿನ ಆಚರಿಸಲಾಯಿತು.
ಹಿರಿಯ ದಿವಾಣಿ ನ್ಯಾಯಾಧೀಶರಾದ ಭರತ್ ಯೋಗೇಶ್ ಕರಗುದರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ವಿಶ್ವದಲ್ಲಿ ಎಲ್ಲರೂ ಸಮಾನವಾಗಿ ಜೀವನ ಸಾಗಿಸಬೇಕು ಎಂಬ ಕಾರಣಕ್ಕಾಗಿ ಮಾನವ ಹಕ್ಕುಗಳ ದಿನ ಆಚಿಸಲಾಗುತ್ತಿದೆ. ಹಿಂದಿನ ದಿನಗಳಲ್ಲಿ ಮನುಷ್ಯರೇ ಮನುಷ್ಯರನ್ನು ಶೋಷಣೆ ಮಾಡುತ್ತಿದ್ದ ವಿಷಯ ಇತಿಹಾಸದ ಪುಟಗಳಿಂದ ನಾವು ಅರಿತುಕೊಂಡಿದ್ದೇವೆ. ಅದನ್ನು ತಪ್ಪಿಸುವ ಸಲುವಾಗಿಯೇ ಈ ವಿಶ್ವ ಮಾನವ ಹಕ್ಕುಗಳ ದಿನ ಆಚರಣೆ ಜಾರಿಗೆ ಬಂದಿದೆ. ಶ್ರೀಮಂತರು ಬಡವರನ್ನು, ನಿರ್ಗತಿಕರನ್ನು ಶೋಷಿಸುವುದನ್ನು ತಡೆಯುವುದು ಮಾನವ ಹಕ್ಕುಗಳ ಗುರಿಯಾಗಿದೆ ಎಂದು ಹೇಳಿದರು.
ದಿವಾಣಿ ನ್ಯಾಯಾಧೀಶ ಸತೀಶ ಎಂ, ವಕೀಲರ ಸಂಘದ ಅಧ್ಯಕ್ಷ ಬಿ.ವಿ. ನೇಕಾರ ಮಾತನಾಡಿದರು. ಬಿ.ಎಸ್. ಬಾಳೇಶ್ವರಮಠ, ತಾಲೂಕು ಶಿಕ್ಷಣ ಇಲಾಖೆಯ ರಾಘವೇಂದ್ರ ಜೋಶಿ, ಮುಖ್ಯ ಶಿಕ್ಷಕ ಎಸ್.ಎಚ್. ಸಣ್ಣಮನಿ ಮತ್ತು ಶಿಕ್ಷಕರು, ಸಿಬ್ಬಂದಿಗಳು ಇದ್ದರು.



