ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್ ಅವರು ದಿನದಿಂದ ದಿನಕ್ಕೆ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ.
ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರನ್ನು ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಪರೀಕ್ಷೆ ಮಾಡಿದ್ದರು. ನಿನ್ನೆ ಜೈಲಾಧಿಕಾರಿಗಳಿಗೆ ಮೆಡಿಕಲ್ ವರದಿ ಸಲ್ಲಿಕೆಯಾಗಿದೆ. ಈ ಮೆಡಿಕಲ್ ರಿಪೋರ್ಟ್‌ನ ಮೇಲಾಧಿಕಾರಿಗಳೊಂದಿಗೆ ಜೈಲಾಧಿಕಾರಿಗಳು ಚರ್ಚೆ ಮಾಡಿದ್ದರು.
ದರ್ಶನ್ ಅವರ ತಪಾಸಣೆ ನಡೆಸಿದ ವಿಮ್ಸ್ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಅವರು ಬೆಡ್ & ದಿಂಬು ನೀಡುವಂತೆ ವರದಿಯಲ್ಲಿ ಉಲ್ಲೇಖ ಮಾಡಿದ್ದರು. ದರ್ಶನ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಿಂದ ಬೆಡ್ & ದಿಂಬು ರವಾನೆ ಮಾಡಲಾಗಿದೆ.
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ಬೆಡ್ & ದಿಂಬ ಅನ್ನು ತರಲಾಯಿತು. ಪರಿಶೀಲನೆ ನಡೆಸಿದ ಪೊಲೀಸರು ದರ್ಶನ್ ಇರುವ ಬ್ಯಾರೆಕ್‌ಗೆ ಶಿಫ್ಟ್ ಮಾಡಿದ್ದಾರೆ.
ಇನ್ನೂ ಜೈಲಿನಲ್ಲಿರುವ ದರ್ಶನ್‌ಗೆ ದಿನ ಕಳೆದಂತೆ ಬೆನ್ನು ನೋವು ಉಲ್ಬಣವಾಗುತ್ತಿದೆ.