ಬೆಂಗಳೂರು: ಕಾಂಬೋಡಿಯಾದಿಂದ ಬೆಂಗಳೂರಿಗೆ ವಿಮಾನದ ಮೂಲಕ ಸಾಗಾಟ ಮಾಡುತ್ತಿದ್ದ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ನಕಲಿ ಸಿಗರೇಟ್ಗಳನ್ನು ಏರ್ಪೋರ್ಟ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹೈದರ್ ಎಂಬಾತ ಐದು ಕಾರ್ಟನ್ ಬಾಕ್ಸ್ಗಳಲ್ಲಿ ನಕಲಿ ಹಾಗೂ ವಿದೇಶಿ ಸಿಗರೇಟ್ಗಳನ್ನು ವಿಮಾನದ ಮೂಲಕ ಸಾಗಿಸುತ್ತಿದ್ದ ಎನ್ನಲಾಗಿದೆ. ಈ ಕುರಿತು ಐಟಿಸಿ ಕಂಪನಿಯ ಪ್ರತಿನಿಧಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸಿಗರೇಟ್ಗಳನ್ನು ಸೀಜ್ ಮಾಡಿದ್ದಾರೆ.
ದಾಳಿಯ ವೇಳೆ ಸುಮಾರು 10 ಸಾವಿರ ಹಾಗೂ 40 ಸಾವಿರ ಸಂಖ್ಯೆಯ ವಿವಿಧ ಮಾದರಿಯ ಸಿಗರೇಟ್ಗಳು ಪತ್ತೆಯಾಗಿವೆ. ಸದ್ಯ ಆರೋಪಿ ಹೈದರ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.









