ಕಳೆದ ಕೆಲ ದಿನಗಳ ಹಿಂದೆ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ನಿಧನರಾಗಿದ್ದರು. ಅವರ ನಿಧನ ಹಲವರಿಗೆ ಆಘಾತವನ್ನುಂಟು ಮಾಡಿತ್ತು. ಇದೀಗ ಜುಬೀನ್ ಗಾರ್ಗ್ ಅವರ ಅಭಿಮಾನಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜುಬೀನ್ ದಾ ಇಲ್ಲ ನಾನಿದ್ದು ಏನು ಮಾಡಲಿ ಎಂದು ಗುವಾಹಟಿಯಲ್ಲಿ ಬುಜೀನ್ ಗಾರ್ಜ್ ಅಭಿಮಾನಿಯೊಬ್ಬ ಸಾರಾ ಘಾಟ್ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. . ಜುಬಿನ್ ಗಾರ್ಗ್ ಕನ್ನಡ ಸೇರಿದಂತೆ 40ಕ್ಕೂ ಅಧಿಕ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಮೃತ ಯುವಕ ಮೊದಲು ತನ್ನ ಬಟ್ಟೆಗಳನ್ನು ಹರಿದುಕೊಂಡಿದ್ದಾನೆ. ಬಳಿಕ ಜುಬಿನ್ ದಾ ಇಲ್ಲ ನಾನು ಇದ್ದು ಏನು ಮಾಡೋದು ಎಂದು ಜೋರಾಗಿ ಕೂಗಿ ಬ್ರಹ್ಮಪುತ್ರ ನದಿಗೆ ಹಾರಿದ್ದಾನೆ. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಇದುವರೆಗೂ ಆ ಯುವಕನ ಯಾವುದೇ ಕುರಹು ಸಿಕ್ಕಿಲ್ಲ.
ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ಭಾರತದ ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್(52) ಶುಕ್ರವಾರ ಮೃತಪಟ್ಟಿದ್ದರು. ಸೆ.20ರಂದು ನಡೆಯುವ ಈಶಾನ್ಯ ಸಂಗೀತ ಉತ್ಸವದಲ್ಲಿ ತಮ್ಮ ಪ್ರದರ್ಶನ ನೀಡಲು ಜುಬೀನ್ ಗಾರ್ಗ್ ಸಿಂಗಾಪುರದಲ್ಲಿದ್ದರು ಎನ್ನಲಾಗಿದೆ. ಈ ವೇಳೆ ಸ್ಕೂಬಾ ಡೈವಿಂಗ್ ಅಪಘಾತ ನಡೆದಿದ್ದು, ತಕ್ಷಣ ಪೊಲೀಸರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.



