ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮೀಪದ ಒಡೆಯರ ಮಲ್ಲಾಪುರ ಮೊರಾರ್ಜಿ ವಸತಿ ಶಾಲೆಯ ಎಸ್‌ಎಸ್‌ಎಲ್‌ಸಿಯ 50 ವಿದ್ಯಾರ್ಥಿಗಳಿಗೆ ಶಾಲೆಯ ಚಿತ್ರಕಲಾ ಶಿಕ್ಷಕ ಪ್ರವೀಣ ಗಾಯಕರ ವಿದ್ಯಾರ್ಥಿಗಳ ಭಾವಚಿತ್ರಗಳ ವಿಶೇಷ ಉಡುಗೊರೆ ನೀಡಿ ಬೀಳ್ಕೊಟ್ಟರು.
Advertisement
ಈ ವೇಳೆ ಹಿರಿಯ ಶಿಕ್ಷಕಿ ಎಂ.ಆಯ್. ಡಂಬಳ ಮಾತನಾಡಿ, ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿ, ಉನ್ನತ ಹಂತದ ಶಿಕ್ಷಣಕ್ಕೆ ಹೋಗುವ ವಿದ್ಯಾರ್ಥಿಗಳಾದ ನೀವು ಕಲಿಸಿದ ಗುರುಗಳು, ಶಾಲೆ, ತಂದೆ-ತಾಯಿಗಳ ಕೀರ್ತಿ ಹೆಚ್ಚಿಸುವ ಮೂಲಕ ಸಮಾಜದ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದರು.
ಶಿಕ್ಷಕರಾದ ಎಸ್.ಕೆ. ನಧಾಪ್, ಆರ್.ಎಚ್. ಮನ್ನಂಗಿ, ಎ.ಎ. ವಠಾರ, ಎಸ್.ಎ. ಮುಲ್ಲಾ, ವಿ.ಹೆಚ್. ರಾಠೋಡ, ಎಫ್.ಸಿ. ಹಮಸಾಗರ, ಎಸ್.ಎನ್. ತಳ್ಳಳ್ಳಿ, ಮುಕ್ತಾ ಆದಿ, ಎಸ್.ಎ. ಬೆಟಗೇರಿ, ಎಸ್.ಆರ್. ಮಾಡಳ್ಳಿ ಸೇರಿ ಸಿಬ್ಬಂದಿಗಳಿದ್ದರು.