ರೈತರು ಯೋಜನೆಯ ಲಾಭ ಪಡೆಯಿರಿ : ಸುರೇಶ ಕುಲಕರ್ಣಿ

0
hulakoti
Spread the love

ವಿಜಯಸಾಕ್ಷಿ ಸುದ್ದಿ, ಹುಲಕೋಟಿ : ನೆಲ ಮತ್ತು ಜಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಧಾರವಾಡ, ಕರ್ನಾಟಕ ನೀರಾವರಿ ನಿಗಮ ನಿ. ಗದಗ, ಎಂ.ಇ.ಐ.ಎಲ್ ಮತ್ತು ನೆಟಾಫಿಮ್ ಸಹಯೋಗದಲ್ಲಿ ಸಿಂಗಟಾಲೂರ ಸಮುದಾಯ ಹನಿ ನೀರಾವರಿ ಯೋಜನೆಗಳಲ್ಲಿ ಕೃಷಿಗೆ ಅಗತ್ಯವಿರುವ ಸಾಮಾಗ್ರಿಗಳಾದ ರಸಗೊಬ್ಬರ, ಬೀಜ ರೋಗ ಮತ್ತು ಕೀಟನಾಶಕಗಳನ್ನು ಒದಗಿಸುವ ಕಂಪನಿಗಳ ಪಾತ್ರ ಮತ್ತು ಭಾಗವಹಿಸುವಿಕೆಯ ಕುರಿತು ಹುಲಕೋಟಿಯ ಕೆ.ಎಚ್. ಪಾಟೀಲ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಭೆಯ ಅಧ್ಯಕ್ಷತೆಯನ್ನು ವಾಲ್ಮಿ ಸಂಸ್ಥೆಯ ನಿರ್ದೇಶಕ ಡಾ. ರಾಜೇಂದ್ರ ಪೊದ್ದಾರ ಮತ್ತು ಕ.ನೀ.ನಿ.ನಿ. ಮುಂಡರಗಿಯ ಮುಖ್ಯ ಕಾರ್ಯ ನಿರ್ವಾಹಕ ಅಭಿಯಂತರ ಐ. ಪ್ರಕಾಶ ವಹಿಸಿದ್ದರು.

ಸಿಂಗಟಾಲೂರು ಏತ/ಹನಿ ನೀರಾವರಿ ಯೋಜನೆ ಪ್ಯಾಕೇಜ್-1 & 3ರಲ್ಲಿ ಪ್ರಸಕ್ತ 2024ರ ಮುಂಗಾರು ಹಂಗಾಮಿನಲ್ಲಿ ನೀರಾವರಿಯನ್ನು ಒದಗಿಸಲಾಗುತ್ತಿದು, ಅದರ ಅವಕಾಶಗಳ ಕುರಿತು ಕೃಷಿಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಒದಗಿಸುವ ಕಂಪನಿಗಳೊಂದಿಗೆ ಚರ್ಚಿಸಲಾಯಿತು. ಸಭೆಯ ಮುಖ್ಯ ಉದ್ದೇಶವನ್ನು ನೆಟಾಫಿಮ್ ಸಹಾಯಕ ಜನರಲ್ ಮ್ಯಾನೇಜರ್ ಗಿರೀಶ ದೇಶಪಾಂಡೆ ವಿವರಿಸಿದರು.

ಸುರೇಶ ಕುಲಕರ್ಣಿ ಮಾತನಾಡಿ, ಸರ್ಕಾರ ಕೈಗೊಂಡ ಹನಿ ನೀರಾವರಿ ಯೋಜನೆಗಳನ್ನು ಈ ಎರಡು ಯೋಜನೆಗಳಲ್ಲಿ ಒಟ್ಟು 41 ನೀರು ಬಳಕೆದಾರರ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಎಜೆನ್ಸಿ ಮತ್ತು ಕೃಷಿಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಒದಗಿಸುವ ಕಂಪನಿಗಳ ಜೊತೆಗೊಡಿ ರೈತರು ಈ ಯೋಜನೆಯ ಲಾಭ ಪಡೆಯಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಕ.ನೀ.ನಿ.ನಿ. ಸಹಾಯಕ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ, ಎಚ್. ನಾಗರಾಜ್, ರಮೇಶ, ಲಕ್ಷ್ಮಣ, ಎನ್.ಎಚ್. ಭಂಡಿ ಉಪಸ್ಥಿತರಿದ್ದರು. ಸಿಂಜೆಂಟಾ, ಟ್ರಾಪಿಕೂಲ್ ಫುಡ್ಸ್, ಕ್ರಿಯಾಜೆನ್, ಜುವಾರಿ ಪಾರ್ಮ ಹಬ್, ಅಡಾಸ್ಕಾ, ಮಂಗಳೂರು ಕೆಮಿಕಲ್ & ಫರ್ಟಿಲೈಜರ್ (ಒಅಈ), ಸ್ಪಿಕ್ ಫರ್ಟಿಲೈಜರ್ ಮತ್ತು ವೆರ್ದೇಸಿಯನ್ ಲೈಪ್ ಸೈನ್ಸ್ (ಸೈಟೋಜೈಮ್) ಪ್ರತಿನಿಧಿಗಳು, ನೇಟಾಫಿಮ್ ಯೋಜನಾ ವ್ಯವಸ್ಥಾಪಕರು ಮತ್ತು ಬೇಸಾಯ ತಜ್ಞರು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here