Homehubballiಶಿಕ್ಷಕ ಕುಟುಂಬದ ಕ್ಷೇಮ ವಿಚಾರಿಸಿದ ಹೊರಟ್ಟಿ

ಶಿಕ್ಷಕ ಕುಟುಂಬದ ಕ್ಷೇಮ ವಿಚಾರಿಸಿದ ಹೊರಟ್ಟಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಇತ್ತೀಚೆಗೆ ಹುಬ್ಬಳ್ಳಿ-ಗದಗ ನಡುವಿನ ಇಂಗಳಹಳ್ಳಿ ಕ್ರಾಸ್ ಬಳಿ ಕಾರು ಮತ್ತು ಟೆಂಪೋ ನಡುವೆ ಭೀಕರ ತೀವ್ರ ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದ ಕಲಘಟಗಿ ತಾಲೂಕಿನ ತಾವರಗೇರಿಯ ಕಲ್ಮೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಲೋಕನಾಥ್ ಗಾರವಾಡ, ಶಾಂತಾ ಗಾರವಾಡ (ಸೊಬಗಿನ), ಸರಕಾರಿ ಪ.ಪೂ ಕಾಲೇಜಿನ ಉಪನ್ಯಾಸಕಿ ಅನ್ನಪೂರ್ಣ ಎಂ. ಸೊಬಗಿನ ಕುಟುಂಬದವರು ತೀವ್ರ ಗಾಯಗೊಂಡು ಹುಬ್ಬಳ್ಳಿಯ ಕೆ.ಎಂ.ಸಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಗತಿಯನ್ನು ತಿಳಿದ ಸಭಾಪತಿ ಬಸವರಾಜ್ ಹೊರಟ್ಟಿಯವರು ತಕ್ಷಣ ಕೆ.ಎಂ.ಸಿಗೆ ಧಾವಿಸಿ ಸದರಿಯವರ ಯೋಗಕ್ಷೇಮವನ್ನು ವಿಚಾರಿಸಿ ಧೈರ್ಯ ತುಂಬಿದರು.

ತಜ್ಞ ವೈದ್ಯರ ಮೂಲಕ ಸಾಧ್ಯವಾದಷ್ಟು ಚಿಕಿತ್ಸೆ ನೀಡಿ ಬೇಗ ಗುಣಮುಖರಾಗುವಂತೆ ನೋಡಿಕೊಳ್ಳಬೇಕು ಎಂದು ಕೆಎಂಸಿಎ ಮುಖ್ಯಸ್ಥರಿಗೆ ಹೊರಟ್ಟಿ ಸೂಚಿಸಿದರು. ಈ ಸಂದರ್ಭದಲ್ಲಿ ಜಿ.ಆರ್. ಭಟ್, ರೇಷ್ಮೆ, ಕುಮಾರ್, ಎಸ್.ಆರ್. ರಾಚಣ್ಣವರ್, ಕಮ್ಮಾರ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img