ಬೆಳಗಾವಿ: ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಉದ್ವಿಗ್ನಗೊಂಡಿದೆ, ಜಿಲ್ಲೆಯ ಹತ್ತರಗಿ ಟೋಲ್ ಬಳಿ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿರುವ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
Advertisement
ಈ ವೇಳೆ ಕೆಲ ವಾಹನಗಳ ಗಾಜು ಪುಡಿ ಪುಡಿಯಾಗಿದ್ದು, ಕೆಲ ಪೊಲೀಸರಿಗೆ ಗಾಯಗಳಾಗಿವೆ. ಅಲ್ಲದೇ ಡಿವೈಎಸ್ಪಿಯೊಬ್ಬರ ಕೈ ಮುರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ಪೊಲೀಸರನ್ನ 1 ಕಿಲೋ ಮೀಟರ್ ದೂರದವರೆಗೂ ಅಟ್ಟಾಡಿಸಿದ್ದಾರೆ.
ಈ ಕಲ್ಲು ತೂರಾಟದಿಂದ ನೂರಾರು ವಾಹನಗಳ ಗಾಜು ಪುಡಿ ಪುಡಿಯಾಗಿದೆ. ರೈತ ಆಕ್ರೋಶಕ್ಕೆ ಬೆದರಿ ಪರಿಸ್ಥತಿ ತಿಳಿಗೊಳಿಸಲು ಪೊಲೀಸರಿಂದ ಪ್ರತಿಭಟನಾಕಾರರ ಮೇಲೆ ಲಾಟಿ ಚಾರ್ಜ್ ಸಹ ಮಾಡಿದ್ದಾರೆ.ಸದ್ಯ ಕಲ್ಲು ತೂರಾಟ ನಡೆಸಿದ ಕೆಲವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.


