ಬೆಂಗಳೂರು:- ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಹಚ್ಚುವಾಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅವಘಡಗಳಾಗಿದ್ದು, 68 ಜನರ ಕಣ್ಣು ಗಾಯಗೊಂಡಿದೆ.
Advertisement
ಕಳೆದ ಎರಡು ದಿನಗಳಲ್ಲಿ ಮಿಂಟೋ ಆಸ್ಪತ್ರೆಯಲ್ಲಿ 25 ಮಂದಿ, ನಾರಾಯಣ ನೇತ್ರಾಲಯದಲ್ಲಿ 43 ಮಂದಿ ಚಿಕಿತ್ಸೆ ಪಡೆದಿದ್ದಾರೆ. ನಾಲ್ವರು ಗಂಭೀರ ಸ್ಥಿತಿಯಲ್ಲಿ ಇದ್ದು, ಮೂವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಗಾಯಗೊಂಡವರಲ್ಲಿ 16 ವರ್ಷದ ಬಾಲಕ ದೃಷ್ಟಿ ಕಳೆದುಕೊಂಡಿದ್ದಾರೆ, 18 ವರ್ಷದ ಯುವಕನ ಕಣ್ಣು ಗಂಭೀರವಾಗಿ ಹಾನಿಯಾಗಿದೆ. ಹಾಗೂ 10 ವರ್ಷದ ಬಾಲಕನ ಮುಖದ ಬಳಿಯೇ ಪಟಾಕಿ ಸ್ಫೋಟದಿಂದ ರೆಪ್ಪೆ ಸುಟ್ಟಿದೆ.
ವೈದ್ಯರು ಪೋಷಕರಿಗೆ ಮಕ್ಕಳೊಂದಿಗೆ ಎಚ್ಚರಿಕೆಯಿಂದ ಪಟಾಕಿ ಹಚ್ಚಲು, ಕಣ್ಣಿನ ಸುರಕ್ಷತೆಗಾಗಿ ಕನ್ನಡಕ ಧರಿಸಲು ಸಲಹೆ ನೀಡಿದ್ದಾರೆ.